ಎಐ ಶೃಂಗಸಭೆಯಲ್ಲಿ  
ವಿದೇಶ

ಎಐ ಎಫೆಕ್ಟ್​ನಿಂದ ಇನ್ನಷ್ಟು ಉದ್ಯೋಗಗಳು ಕಡಿತ! AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕ್ರಿಸ್ಟಲಿನಾ ಜಾರ್ಜಿವಾ ಶಾಕಿಂಗ್ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಎಐ ವೇಗಕ್ಕೆ ಸಾಫ್ಟ್​ವೇರ್​ ಟೆಕ್ಕಿಗಳು ತತ್ತರ
  • ಜಾಗತಿಕವಾಗಿ ಶೇ.40ರಷ್ಟು ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಕೃತಕ ಬುದ್ಧಿಮತ್ತೆ
  • AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕ್ರಿಸ್ಟಲಿನಾ ಜಾರ್ಜಿವಾ ಅಚ್ಚರಿ ಹೇಳಿಕೆ
ನವದೆಹಲಿ: 2026ರ ಕೃತಕ ಬುದ್ಧಿಮತ್ತೆ (AI) ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ, ಭವಿಷ್ಯದಲ್ಲಿ ಜಾಗತಿಕವಾಗಿ ಶೇ.40ರಷ್ಟು ಉದ್ಯೋಗಗಳು ಕಳೆದುಹೋಗಲಿವೆ ಎಂದು ಎಚ್ಚರಿಸಿದ್ದಾರೆ.

ಜಗತ್ತನ್ನೇ ಅಲುಗಾಡಿಸುತ್ತಿದೆ ಎಐ

ಸಾಫ್ಟ್‌ವೇರ್​ ವಲಯದಲ್ಲಿ ಟೆಕ್ಕಿಗಳಿಗೆ ಅದಾಗಲೇ ದೊಡ್ಡ ಮಟ್ಟದ ಲೇಆಫ್​ ಪ್ರಕ್ರಿಯೆಗಳು ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ದೂಡಿದ್ದು, ಈ ಮಧ್ಯೆ ಎಐ ಕೂಡ ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವುದು ದುಡಿಮೆಯ ಬದುಕನ್ನು ಇನ್ನಷ್ಟು ಕಷ್ಟಕರವಾಗಿಸಿದೆ. ಕೃತಕ ಬುದ್ಧಿಮತ್ತೆ ಜಾಗತಿಕ ಉದ್ಯೋಗ ವಲಯವನ್ನು ಅಲುಗಾಡಿಸುವ ಪ್ರಮುಖ ಬದಲಾವಣೆಗಳನ್ನು ತರಲಿದೆ ಎಂದು ಜಾರ್ಜಿವಾ ಎಚ್ಚರಿಸಿದ್ದಾರೆ.

ಶೇ.40ರಿಂದ 60ರಷ್ಟು

ಪ್ರಸ್ತುತ ಎಐ ಶರವೇಗದಲ್ಲಿ ಸಾಗುತ್ತಿದ್ದು, ಪ್ರಪಂಚದಾದ್ಯಂತ ಬಹಳ ದೊಡ್ಡದಾಗಿ ವಿಸ್ತರಿಸಿಕೊಂಡಿದೆ. ಭವಿಷ್ಯದಲ್ಲಿ, ಶೇ.40ರಷ್ಟು ಉದ್ಯೋಗಗಳ ಮೇಲೆ ಇದು ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಉದ್ಯೋಗಿಗಳಿಗೆ ಇದು ಭಾರೀ ಸವಾಲಾಗಲಿದೆ ಎಂದು ಸ್ಪಷ್ಟಪಡಿಸಿದರು. ಮುಖ್ಯವಾಗಿ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಯುವಜನರಿಗೆ ದೊಡ್ಡ ಹೊಡೆತ ನೀಡಲಿದೆ. ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಎಫೆಕ್ಟ್​ ಶೇ.60ರಷ್ಟು ಇರಬಹುದು ಎಂದು ಅಧ್ಯಯನಗಳು ತೋರಿಸಿವೆ ಎಂದಿದ್ದಾರೆ.

ಇದು ಎಐ ಎಫೆಕ್ಟ್​

ಭಾರತದಲ್ಲಿ ಎಐ ಪರಿಣಾಮ ಸದ್ಯದ ಮಟ್ಟಿಗೆ ಶೇ.26ರಷ್ಟಿದೆ. ಈ ಸಂಖ್ಯೆ ಚಿಕ್ಕದಾಗಿ ಕಂಡರೂ, ಪ್ರತಿ ವರ್ಷ ಲಕ್ಷಾಂತರ ಜನರು ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುವ ಭಾರತಕ್ಕೆ ಇದು ಸಣ್ಣ ವಿಷಯವಲ್ಲ. ಹೀಗಾಗಿಯೇ ಹೊಸ ಕೌಶಲ್ಯಗಳನ್ನು ಕಲಿಯುವುದು ಮಾತ್ರವಲ್ಲ, ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಲು ಕಲಿಯಬೇಕಿದೆ ಹಾಗೂ ಇದರ ಅನಿವಾರ್ಯತೆ ಎದುರಾಗಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಅಭಿಪ್ರಾಯಿಸಿದರು,(ಏಜೆನ್ಸೀಸ್).