ನಮ್ಮ ಮೇಲೆ ನಡೆಯುವ ಎಲ್ಲಾ ದಾಳಿ ಹಿಂದೆ ಭಾರತದ ಪಾತ್ರವಿದೆ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್
- ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನ ನಡೆಸಿದ ಡ್ರೋನ್ ದಾಳಿಯ ಹಿಂದೆ ಭಾರತದ ಬೆಂಬಲ ಆರೋಪ
- ಅಫ್ಘಾನಿಸ್ತಾನಕ್ಕೆ ಭಾರತ ಔಷಧ ಕಳುಹಿಸಿದ್ದನ್ನು ಪಾಕ್ ತಪ್ಪಾಗಿ ಅರ್ಥೈಸಿಕೊಂಡಿದೆಯೇ?
- ನಮ್ಮ ಮೇಲೆ ನಡೆಯುವ ಎಲ್ಲಾ ದಾಳಿ ಹಿಂದೆ ಭಾರತದ ಪಾತ್ರವಿದೆ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್
ಇಸ್ಲಾಮಾಬಾದ್: ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನ ನಡೆಸುವ ಡ್ರೋನ್ ದಾಳಿ ಹಿಂದೆ ಭಾರತದ ಬೆಂಬಲವಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif on India) ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಅಫ್ಘಾನಿಸ್ತಾದ ತಾಲಿಬಾನ್ ಪಡೆಗಳು ಪಾಕಿಸ್ತಾನದಲ್ಲಿದ್ದ ಭಯೋತ್ಪಾದನಾ ಸಂಘಟನೆ ಐಸಿಸ್ (ISIS) ಶಿಬಿರಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿತ್ತು.
ತಾಲಿಬಾನ್ ಹಿಂದೆ ಭಾರತವಿದೆ!
ಇತ್ತೀಚೆಗೆ, ಖಾಸಗಿ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿರುವ ಪಾಕ್ ಸಚಿವ ಖವಾಜಾ ಆಸಿಫ್, ಭಾರತ ಅಫ್ಘಾನಿಸ್ತಾನಕ್ಕೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ಅವರು ಕೇವಲ ಡ್ರೋನ್ ಮಾತ್ರವಲ್ಲ, ಇತರ ಶಸ್ತ್ರಾಸ್ತ್ರಗಳನ್ನು ಸಹ ರವಾನೆ ಮಾಡುತ್ತಿದ್ದಾರೆಂದು ನಮಗೆ ಮಾಹಿತಿ ದೊರೆತಿದೆ ಎಂದು ಆಸಿಫ್ ಆರೋಪಿಸಿದ್ದಾರೆ.
ಅಫ್ಫಾನಿಸ್ತಾನಕ್ಕೆ 5 ಟನ್ ಔಷಧಗಳನ್ನು ಕಳುಹಿಸಿದ ಭಾರತ
ಕೆಲ ದಿನಗಳ ಹಿಂದೆ ಭಾರತ ಅಫ್ಫಾನಿಸ್ತಾನಕ್ಕೆ ಸುಮಾರು 5 ಟನ್ ಔಷಧಗಳನ್ನು ಕಳುಹಿಸಿದೆ. ಆದರೆ ಪಾಕಿಸ್ತಾನ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಭಾರತ, ತಾಲಿಬಾಲ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದೆ ಎಂದು ಆರೋಪಿಸುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುಜುಗರಕ್ಕೆ ಇಡುಮಾಡುವುದು ಇವರ ಉದ್ದೇಶ ಎನ್ನುವುದು ಭಾರತದ ಜಾಗತಿಕ ರಾಜಕೀಯ ಪರಣಿತರ ಅಭಿಪ್ರಾಯವಾಗಿದೆ.
ಪಾಕ್ ಮೇಲೆ ತಾಲಿಬಾನ್ ದಾಳಿ!
ಅಫ್ಘಾನಿಸ್ತಾದ ಕಂದಹಾರ್ ಮತ್ತು ಕಾಬೂಲ್ ಮೇಎ ಪಾಕಿಸ್ತಾನ ದಾಳಿ ನಡೆಸಿದ ಹಿನ್ನಲೆ, ತಾಲಿಬಾನ್ ಗುರುವಾರ (ಜೂ.25) ಪಾಕಿಸ್ತಾನದ ಖೈಬರ್ ಕಣಿವೆ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆಸಿತ್ತು. ಈಗ ಈ ದಾಳಿಗೆ ಡ್ರೋನ್ಗಳನ್ನು ಭಾರತವೇ ಒದಗಿಸಿದೆ ಎನ್ನುವುದು ಪಾಕಿಸ್ತಾನದ ವಾದವಾಗಿದೆ, (ಏಜನ್ಸೀಸ್).