ಸ್ವಿಟ್ಜರ್ಲೆಂಡ್ನಲ್ಲಿ ಕ್ಯಾಬ್ ದರ ಕೇಳಿ ನಟಿ ಗಪ್ಚುಪ್
- ಸ್ವಿಟ್ಜರ್ಲೆಂಡ್ನಲ್ಲಿ ಒಂದು ಗಂಟೆ ಕ್ಯಾಬ್ ಪ್ರಯಾಣದ ದರ ಕೇಳಿ ನಟಿ ಶಾಕ್
- ವಿಡಿಯೋ ಮೂಲಕ ಅಲ್ಲಿನ ದರ ತೋರಿಸಿದ ಬ್ಯೂಟಿ
- ಒಂದು ಗಂಟೆ ಪ್ರಯಾಣಕ್ಕೆ ಬರೋಬ್ಬರಿ 30,000 ರೂ.
ಸ್ವಿಟ್ಜರ್ಲೆಂಡ್: ನಮಗೆಲ್ಲ ಗೊತ್ತಿರುವಂತೆ ಇಂದು ಟ್ಯಾಕ್ಸಿ ಮತ್ತು ಆಟೋ ಸೇವೆಗಳು ಹಿಂದಿಗಿಂತ ಹೆಚ್ಚಿವೆ. ಅದರಲ್ಲೂ, ಹೆಸರಾಂತ ನಗರ ಪ್ರದೇಶಗಳಲ್ಲಿ ಕ್ಯಾಬ್ಗಳ ಲಭ್ಯತೆ ನಿರೀಕ್ಷೆಗಿಂತ ಹೆಚ್ಚು. ಹೆಜ್ಜೆಗೊಂದು ಸಿಗುವ ಟ್ಯಾಕ್ಸಿ ಸೇವೆಗಳು ಗ್ರಾಹಕರಿಗೆ ಕೆಲವೊಮ್ಮೆ ಕೈಗೆಟುಕುವ ದರದಲ್ಲಿ, ಇನ್ನೂ ಕೆಲವೊಮ್ಮೆ ದುಬಾರಿ ಮೊತ್ತದಲ್ಲಿ ಸೇವೆ ನೀಡುತ್ತದೆ. ಆದರೆ, ಎಲ್ಲೋ ಒಮ್ಮೊಮ್ಮೆ ದುಪ್ಪಟ್ಟು ದರದಲ್ಲಿ ಹಣ ಪಡೆಯುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಸದ್ಯ ಇಲ್ಲೊಂದು ಘಟನೆ ಅದನ್ನೇ ಒತ್ತಿಹೇಳಿದ್ದು, ಅಮೆರಿಕನ್ ನಟಿಗೆ ಬಿಗ್ ಶಾಕ್ ನೀಡಿದೆ.
ಅಮೆರಿಕದ ಸೋಷಿಯಲ್ ಮೀಡಿಯಾ ಸ್ಟಾರ್ ಮತ್ತು ಟಿವಿ ನಿರೂಪಕಿ ಆಗಿರುವ ಗಿನಾ ಡಾರ್ಲಿಂಗ್, ಸ್ವಿಟ್ಜರ್ಲೆಂಡ್ ಪ್ರವಾಸದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿನ ಟ್ಯಾಕ್ಸಿ ಏರಿದ ನಟಿ, ಸುಮಾರು ಒಂದು ಗಂಟೆಗಳ ಕಾಲ ಕಾರಿನಲ್ಲಿಯೇ ಪ್ರಯಾಣಿಸಿದರು. ನಂತರದಲ್ಲಿ, ಕ್ಯಾಬ್ ಚಾಲಕನಿಗೆ ಎಷ್ಟಾಯಿತು ಎಂದು ಕೇಳಿದಾಗ, ಆತ ಹೇಳಿದ ಮೊತ್ತ ಕೇಳಿ ಒಂದು ನಿಮಿಷ ನಿಂತಲ್ಲೇ ಆಘಾತಕ್ಕೊಳಗಾಗಿದ್ದಾರೆ.
ಕೇವಲ ಒಂದು ಗಂಟೆಯ ಟ್ಯಾಕ್ಸಿ ಪ್ರಯಾಣಕ್ಕೆ 338 ಡಾಲರ್ ಬಿಲ್ ಪಾವತಿ ಮಾಡಿದ್ದಾರೆ. ಅಲ್ಲಿಗೆ ಭಾರತೀಯ ಕರೆನ್ಸಿಯಲ್ಲಿ ಅದು 30,500 ರೂ. ಅನ್ನೋದು ನಿಜಕ್ಕೂ ಅಚ್ಚರಿ ಪಡುವ ಸಂಗತಿಯೇ ಬಿಡಿ. ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಘಟನೆಯ ವಿಡಿಯೊವನ್ನು ಪೋಸ್ಟ್ ಮಾಡಿರುವ ಡಾರ್ಲಿಂಗ್, ಏನಾಯಿತು ಎಂಬುದನ್ನು ವಿವರವಾಗಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲಯಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಕಂಡ ನೆಟ್ಟಿಗರು, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಅಲ್ಲಿನ ಜೀವನಶೈಲಿ ಮತ್ತು ಜೀವನ ಸಾಗಿಸಲು ತಗಲುವ ಖರ್ಚು-ವೆಚ್ಚಗಳು ದುಬಾರಿ ಆಗಿರುವ ಹಿನ್ನೆಲೆ ಟ್ಯಾಕ್ಸಿ ದರಗಳು ಇತರ ದೇಶಗಳಿಗಿಂತ ಹೆಚ್ಚಿರಬಹುದು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).