ಅಯ್ಯೋ ಇದೇನಿದು ವಿಚಿತ್ರ... ಅತ್ಯಂತ ಡೇಂಜರಸ್ ಹಾವಿನ ವರ್ತನೆ ಕಂಡು ಹೌಹಾರಿದ ನೆಟ್ಟಿಗರು! ವಿಡಿಯೋ ವೈರಲ್...Venomous Snake
- ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ
- ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ವೈರಲ್ ಆಗಿಬಿಡುತ್ತವೆ
- ವೈರಲ್ ಆಗುವ ವಿಡಿಯೋಗಳಲ್ಲಿ ಹಾವಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ಒಂದು
Venomous Snake : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.
ಹಾವುಗಳೆಂದರೆ ಮನುಷ್ಯನಿಗೆ ವಿಶೇಷ ಆಸಕ್ತಿ. ಹಾವನ್ನು ಕಂಡರೆ ಭಯಪಟ್ಟರು ಕೂಡ ಹಾವಿನ ಬಗ್ಗೆ ತಿಳಿದುಕೊಳ್ಳಲು ಭಾರಿ ಕುತೂಹಲವೊಂದಿರುತ್ತಾನೆ. ಹೀಗಾಗಿ ಹಾವಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿ, ನೆಟ್ಟಿಗರ ಗಮನ ಸೆಳೆಯುತ್ತದೆ. ಅದೇ ರೀತಿ ಹಾವೊಂದರ ವಿಡಿಯೋ ಇದೀಗ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಆಫ್ರಿಕಾದ ಹಾವಿನ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀಲಿ ಹಾವು ಆಫ್ರಿಕಾದಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವು. ಈ ಹಾವು ತುಂಬಾನೇ ಡೇಂಜರ್. ಆದರೆ, ಈ ಹಾವು ನೆಟ್ಟಗೆ ನಿಂತು ಡಾನ್ಸ್ ಮಾಡುತ್ತಿರುವ ದೃಶ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇದೇನಿದು ವಿಚಿತ್ರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ವಿಡಿಯೋದಲ್ಲಿ ಹಾವು ನೃತ್ಯ ಮಾಡುತ್ತಿದೆ. ತನ್ನ ದೇಹವನ್ನು ಬಳಕುವ ಬಳ್ಳಿಯಂತೆ ಬಳಕಿಸುತ್ತಿದೆ. ವಿಡಿಯೋದ ಹಿನ್ನೆಲೆಯಲ್ಲಿ ಒಂದು ಹಾಡು ಕೂಡ ಪ್ಲೇ ಆಗುತ್ತದೆ. ಈ ಆಸಕ್ತಿದಾಯಕ ವಿಡಿಯೋವನ್ನು 'nkosenathikoel' ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಮಂದಿ ಈ ವಿಡಿಯೋವನ್ನು ನೋಡಿದ್ದು, ಬಗೆಬಗೆಯ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ.
ಈ ವಿಡಿಯೋವನ್ನು ನೋಡಿದಾಗ ನನಗೆ ಒಂದು ರೀತಿಯಲ್ಲಿ ರೋಮಾಂಚನವಾಯಿತು. ನಿಜಕ್ಕೂ ಹಾವು ನೃತ್ಯ ಮಾಡುತ್ತಿದೆಯೇ? ಇದು ಎಐ ವಿಡಿಯೋನಾ? ನಿಜವಾಗಿಯೂ ಅಲ್ಲಿ ಏನು ನಡೆಯುತ್ತಿದೆ? ಇದೇನಿದು ವಿಚಿತ್ರ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂದು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್).