WEB
ವಿದೇಶ

ತ್ರಿಶಕ್ತಿ ಸಂಗಮ! : ಮೂವರು ನಾಯಕರ ಭೇಟಿಯ ಕಾರ್ಯಸೂಚಿ ಏನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ದಿನಾಂಕ- ನವೆಂಬರ್ 19. ಸಂದರ್ಭ-ಚೀನಾದ ಶೆನ್​ಜೆನ್​ನಲ್ಲಿ ನಡೆಯಲಿರುವ ಎಷ್ಯಾ ಪೆಸಿಫಿಕ್ ಎಕಾನಾಮಿಕ್ ಕೋಆಪರೇಷನ್ (ಎಪಿಇಸಿ) ಶೃಂಗಸಭೆ. ಈ ಶೃಂಗಸಭೆಯನ್ನು 1945ರ ಯಾಲ್ಟ್ ಸಮ್ಮೇಳನಕ್ಕೆ ಹೋಲಿಸಲಾಗುತ್ತದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ದಿನಾಂಕ- ನವೆಂಬರ್ 19. ಸಂದರ್ಭ-ಚೀನಾದ ಶೆನ್​ಜೆನ್​ನಲ್ಲಿ ನಡೆಯಲಿರುವ ಎಷ್ಯಾ ಪೆಸಿಫಿಕ್ ಎಕಾನಾಮಿಕ್ ಕೋಆಪರೇಷನ್ (ಎಪಿಇಸಿ) ಶೃಂಗಸಭೆ. ಈ ಶೃಂಗಸಭೆಯನ್ನು 1945ರ ಯಾಲ್ಟ್ ಸಮ್ಮೇಳನಕ್ಕೆ ಹೋಲಿಸಲಾಗುತ್ತದೆ. ಆಗ ಮೂರು ಸೂಪರ್ ಪವಾರ್ ದೇಶಗಳ ನಾಯಕರ ಇಂತಹದ್ದೇ ಭೇಟಿಯು ಮಹಾಯುದ್ಧದ ನಂತರದ ಪ್ರಪಂಚದ ನಕ್ಷೆಯನ್ನು ಬದಲಿಸಿತ್ತು. ಈಗಲೂ ಅಂತಹದ್ದೇನಾದರೂ ಮಹತ್ವದ ಬೆಳವಣಿಗೆ ನಡೆಯಲಿದೆಯೇ ಎಂಬ ಕುತೂಹಲ ಜಾಗತಿಕ ವಲಯದಲ್ಲಿ ಮೂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಅವರನ್ನು ಒಂದೇ ವೇದಿಕೆಗೆ ತರುವ ಸಿದ್ಧತೆ 2025ರ ಫೆಬ್ರವರಿಯಿಂದಲೇ ನಡೆಯುತ್ತಿದೆ. ಅಂದು ಅಧ್ಯಕ್ಷ ಟ್ರಂಪ್, ರಷ್ಯಾ-ಯೂಕ್ರೇನ್ ಯುದ್ಧ ಮುಗಿದ ನಂತರ ರಷ್ಯಾ ಮತ್ತು ಚೀನಾದೊಂದಿಗೆ ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಮಾತುಕತೆ ನಡೆಸಲು ಬಯಸುವುದಾಗಿ ಹೇಳಿದ್ದರು. 2026ರ ಸೆಪ್ಟೆಂಬರ್ 1ರಂದು ಮಹತ್ವದ ಬೆಳವಣಿಗೆಯೊಂದು ನಡೆಯಿತು. ಅಂದು ಪುತಿನ್ ಅವರ ಸಲಹೆಗಾರ ಯೂರಿ ಉಷಾಕೋವ್ ಎಸ್​ಸಿಒ ಶೃಂಗಸಭೆಯಲ್ಲಿ ಮಾತನಾಡಿ, ಪುತಿನ್, ಟ್ರಂಪ್ ಮತ್ತು ಜಿನ್​ಪಿಂಗ್ ಅವರು ಏಷ್ಯಾ-ಪೆಸಿಫಿಕ್ ಎಕನಾಮಿಕ್ ಕೋಆಪರೇಷನ್ (ಎಪಿಇಸಿ) ಶೃಂಗಸಭೆಯಲ್ಲಿ ಭೇಟಿಯಾಗಬಹುದು ಎಂದು ಹೇಳಿದ್ದರು. ಈ ಬಗ್ಗೆ ಪುತಿನ್ ಮತ್ತು ಟ್ರಂಪ್ ಈಗಾಗಲೇ ಮಾತನಾಡಿದ್ದರು. ಅಂತಿಮ ನಿರ್ಧಾರ ಎಪಿಇಸಿ ಆತಿಥೇಯ ರಾಷ್ಟ್ರವಾದ ಚೀನಾದ ಕೈಯಲ್ಲಿತ್ತು. ಅಮೆರಿಕ ಒಪ್ಪಿದರೆ ತನಗೆ ಯಾವುದೇ ಆಕ್ಷೇಪವಿಲ್ಲ ಎಂದು ಚೀನಾ ಹೇಳಿತು. ಚೀನಾ ಮತ್ತು ಅಮೆರಿಕದ ವಿದೇಶಾಂಗ ಸಚಿವರು ನವೆಂಬರ್ 11ರಂದು ದೂರವಾಣಿಯಲ್ಲಿ ಮಾತನಾಡಿದರು. ಇದಾದ ನಂತರ ನವೆಂಬರ್ 14ರಿಂದ 16ರ ನಡುವೆ ಅಮೆರಿಕ, ರಷ್ಯಾ ಮತ್ತು ಚೀನಾ ಸಭೆಯ ದಿನಾಂಕ ಮತ್ತು ಸ್ಥಳವನ್ನು ಖಚಿತಪಡಿಸಿದವು.

1845ರ ಫೆಬ್ರವರಿಯಲ್ಲಿ ನಡೆದ ಯಾಲ್ಟಾ ಶೃಂಗಸಭೆಯಲ್ಲಿ ಬ್ರಿಟನ್​ನ ಆಗಿನ ಪ್ರಧಾನಿ ವಿನ್​ಸ್ಟನ್ ರ್ಚಚಿಲ್, ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್​ವೆಲ್ಟ್ ಮತ್ತು ಸೋವಿಯತ್ ಒಕ್ಕೂಟದ ನಾಯಕ ಜೋಸೆಫ್ ಸ್ಟಾಲಿನ್. ಈ ಭೇಟಿಯ 6 ತಿಂಗಳ ನಂತರ ಅಮೆರಿಕವು ಜಪಾನ್ ಮೇಲೆ ಪರಮಾಣು ದಾಳಿ ನಡೆಸಿತು ಮತ್ತು 7 ತಿಂಗಳ ನಂತರ ಸೆ. 2ರಂದು 2ನೇ ಮಹಾಯುದ್ಧ ಕೊನೆಗೊಂಡಿತು.

ಮೂವರು ನಾಯಕರ ಭೇಟಿಯ ಕಾರ್ಯಸೂಚಿ ಏನು?

ಈವರೆಗೆ ಯಾವುದೇ ಅಧಿಕೃತ ಅಜೆಂಡಾವನ್ನು ಘೊಷಿಸಲಾಗಿಲ್ಲ. ಸೂಚನೆಗಳನ್ನು ಗಮನಿಸಿದರೆ, ಮೂವರಿಗೂ ತಮ್ಮದೇ ಆದ ಪ್ರತ್ಯೇಕ ಅಜೆಂಡಾಗಳಿವೆ.

ಅಮೆರಿಕದ ಅಜೆಂಡಾ: ‘ಪರಮಾಣು ಶಸ್ತ್ರಾಸ್ತ್ರಗಳನ್ನು ಕಡಿಮೆ ಮಾಡುವ ಬಗ್ಗೆ ನಾವು ರ್ಚಚಿಸಬಹುದು’ ಎಂದು ಟ್ರಂಪ್ ಹೇಳಿದ್ದಾರೆ. ವಾಸ್ತವವಾಗಿ, 2010ರಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ಪರಮಾಣು ಶಸ್ತ್ರಾಸ್ತ್ರಗಳನ್ನು ಸೀಮಿತವಾಗಿರಿಸುವ ‘ನ್ಯೂ ಖಖಅಖ’ ಒಪ್ಪಂದವಾಗಿತ್ತು. 2026ರಲ್ಲಿ ರಷ್ಯಾ ಇದನ್ನು ನವೀಕರಿಸಲಿಲ್ಲ. ಅಮೆರಿಕ ಈಗ ಈ ಒಪ್ಪಂದದಲ್ಲಿ ಚೀನಾವನ್ನೂ ಸೇರಿಸಲು ಬಯಸಿದೆ.

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಪಕ್ಷದ ಸೋಲಿನ ನಂತರ ಈ ಭೇಟಿ ನಡೆಯುತ್ತಿದೆ. ಸೋಲಿಗೆ ಪ್ರಮುಖ ಕಾರಣ ಇರಾನ್ ಯುದ್ಧ ಮತ್ತು ಅದರಿಂದ ಉಂಟಾದ ಹಣದುಬ್ಬರವಾಗಿತ್ತು. ಚೀನಾ ಮತ್ತು ರಷ್ಯಾ ಎರಡೂ ಇರಾನ್​ಗೆ ಆಪ್ತವಾಗಿವೆ. ಈಗ ಟ್ರಂಪ್ ಈ ದೇಶಗಳ ಮೂಲಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸಬಹುದು.

ಚೀನಾದ ಕಾರ್ಯಸೂಚಿ: ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರವನ್ನು ತಡೆಹಿಡಿಯುವ ಒಪ್ಪಂದವು 2027ರ ಜನವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಚೀನಾ ಮತ್ತು ಅಮೆರಿಕದ ನಡುವೆ ಈ ಬಗ್ಗೆಯೂ ಮಾತುಕತೆ ನಡೆಯಬಹುದು. ವ್ಯಾಪಾರ ಒಪ್ಪಂದವಾಗುವ ಬದಲು ಸದ್ಯಕ್ಕೆ ಕದನ ವಿರಾಮ ಇನ್ನಷ್ಟು ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಕಡಿಮೆ ಮಾಡುವ ಅಮೆರಿಕದ ಪ್ರಸ್ತಾವನೆಯನ್ನು ಚೀನಾ ವಿರೋಧಿಸಬಹುದು. ಮೂರು ದೇಶಗಳಲ್ಲಿ ಅತಿ ಕಡಿಮೆ ಪರಮಾಣು ಶಸ್ತ್ರಾಸ್ತ್ರಗಳಿರುವುದು ಚೀನಾದ ಬಳಿಯೇ. ಅದು 2023ರಿಂದ ಪ್ರತಿ ವರ್ಷ 100 ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ 2026ರ ಫೆಬ್ರವರಿಯಲ್ಲಿ, ‘ನಮ್ಮ ಬಳಿ ಅಮೆರಿಕ ಮತ್ತು ರಷ್ಯಾದಷ್ಟು ಪರಮಾಣು ಶಸ್ತ್ರಾಸ್ತ್ರಗಳಿಲ್ಲ, ಆದ್ದರಿಂದ ನಾವು ಶಸ್ತ್ರಾಸ್ತ್ರ ಕಡಿತದ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ’ ಎಂದು ಹೇಳಿದ್ದರು.

ರಷ್ಯಾದ ಯೋಜನೆ: ಸಭೆಯಲ್ಲಿ ಯೂಕ್ರೇನ್ ವಿಷಯ ಖಂಡಿತವಾಗಿಯೂ ಇರಲಿದೆ ಎಂದು ಪುತಿನ್ ಸಲಹೆಗಾರ ಯೂರಿ ಉಷಾಕೋವ್ ಹೇಳಿದ್ದಾರೆ. ವಾಸ್ತವವಾಗಿ, ಯೂಕ್ರೇನ್​ನೊಂದಿಗಿನ ಒಪ್ಪಂದವು ತನ್ನ ಷರತ್ತುಗಳ ಮೇಲೆಯೇ ನಡೆಯಬೇಕೆಂದು ರಷ್ಯಾ ಬಯಸುತ್ತದೆ. ಉದಾಹರಣೆಗೆ- ಯುದ್ಧದಲ್ಲಿ ವಶಪಡಿಸಿಕೊಂಡ ಪ್ರದೇಶಗಳು ತನಗೆ ಸಿಗಬೇಕು, ಯೂಕ್ರೇನ್ ನ್ಯಾಟೋ ಸೇರಬಾರದು, ಅದರ ಸೈನ್ಯ ಸೀಮಿತವಾಗಿರಬೇಕು, ರಷ್ಯಾದ ಕಡೆಗೆ ನ್ಯಾಟೋ ವಿಸ್ತರಣೆಯಾಗುವುದನ್ನು ನಿಲ್ಲಿಸಬೇಕು. ಎರಡೂ ದೇಶಗಳ ಗಡಿಯ ಕೆಲವು ಪ್ರದೇಶಗಳನ್ನು ಭಾರಿ ಶಸ್ತ್ರಾಸ್ತ್ರಗಳ ನಿಯೋಜನೆ ಇಲ್ಲದ ‘ಗ್ರೇ ಜೋನ್’ (ತಟಸ್ಥ ವಲಯ) ಮಾಡಲು ಅಮೆರಿಕ ಪ್ರಸ್ತಾಪಿಸಿದೆ. ರಷ್ಯಾ ಇದನ್ನೂ ವಿರೋಧಿಸುತ್ತಿದೆ.

81 ವರ್ಷಗಳ ಹಿಂದಿನ ಯಾಲ್ಟಾ ಸಮ್ಮೇಳನಕ್ಕೆ ಹೋಲಿಕೆ

ಎರಡನೇ ಮಹಾಯುದ್ಧವು 1945ರ ಫೆಬ್ರವರಿಯಲ್ಲಿ ಮುಗಿಯುವ ಹಂತದಲ್ಲಿತ್ತು. ಅಂದು ವಿಶ್ವದ ಮೂವರು ದೊಡ್ಡ ನಾಯಕರಾದ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್​ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್​ಸ್ಟನ್ ರ್ಚಚಿಲ್ ಮತ್ತು ಸೋವಿಯತ್ ಒಕ್ಕೂಟದ ನಾಯಕ ಜೋಸೆಫ್ ಸ್ಟಾಲಿನ್ ಯಾಲ್ಟಾದಲ್ಲಿ ಒಟ್ಟುಗೂಡಿದ್ದರು. ಅಲ್ಲಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

  • ಜಪಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ ಸಹಾಯವಾಗುವಂತೆ ಸೋವಿಯತ್ ಒಕ್ಕೂಟ ಜಪಾನ್ ಮೇಲೆ ದಾಳಿ ಮಾಡುವುದು.

  • ನಾಜಿ ಜರ್ಮನಿಯನ್ನು ಅಮೆರಿಕ, ಬ್ರಿಟನ್, ಸೋವಿಯತ್ ಒಕ್ಕೂಟ ಮತ್ತು ಫ್ರಾನ್ಸ್ ನಡುವೆ ನಾಲ್ಕು ವಲಯಗಳಾಗಿ ವಿಂಗಡಿಸುವುದು.

  • ಯುರೋಪಿನ ದೇಶಗಳಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಆಯ್ಕೆ ಮಾಡುವ ಬಗ್ಗೆ ಮಾತುಕತೆಯಾಯಿತು. ಇದರಿಂದ ಯುರೋಪ್ ಸೋವಿಯತ್ ಮತ್ತು ಅಮೆರಿಕ ಎಂಬ ಎರಡು ಬಣಗಳಾಗಿ ವಿಭಜನೆ ಯಾಯಿತು. ಇದು ಮುಂದೆ ಶೀತಲ ಸಮರಕ್ಕೆ ನಾಂದಿ ಹಾಡಿತು.

  • ವಿಶ್ವಸಂಸ್ಥೆ ರಚನೆಯಾಯಿತು. ಅಮೆರಿಕ, ಸೋವಿಯತ್ ಒಕ್ಕೂಟ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ- ಈ ಐದು ಕಾಯಂ ಸದಸ್ಯ ರಾಷ್ಟ್ರಗಳಿಗೆ ವಿಟೋ ಅಧಿಕಾರ ಸಿಕ್ಕಿತು. ಈ ಸಭೆಯಲ್ಲಿ ವಿಶ್ವದ ಮೂರು ಸೂಪರ್ ಪವರ್​ಗಳು ಇಡೀ ಜಗತ್ತಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವು. ಯಾವ ದೇಶಗಳ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತಿತ್ತೋ, ಆ ದೇಶಗಳು ಅಲ್ಲಿ ಹಾಜರಿರಲಿಲ್ಲ. ಈಗ ಅಮೆರಿಕ, ರಷ್ಯಾ ಮತ್ತು ಚೀನಾ ವಿಶ್ವದ ಅತಿದೊಡ್ಡ ಶಕ್ತಿಗಳಾಗಿವೆ, ಆದ್ದರಿಂದ ಇವುಗಳ ಸಭೆಯನ್ನು ‘ಯಾಲ್ಟಾ 2.0’ ಎಂದು ಕರೆಯಲಾಗುತ್ತಿದೆ.

ಭಾರತದ ಮೇಲೆ ಏನು ಪರಿಣಾಮ?

ಈ ಬಗ್ಗೆ ತಜ್ಞರಲ್ಲಿ ಎರಡು ರೀತಿಯ ಅಭಿಪ್ರಾಯಗಳಿವೆ. ‘ಒಂದು ಸೂಪರ್ ಪವರ್ ಒತ್ತಡವನ್ನು ಎದುರಿಸಲು ಭಾರತ ಮತ್ತೊಂದು ಸೂಪರ್ ಪವರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಒಂದು ವೇಳೆ ರಷ್ಯಾ, ಚೀನಾ ಮತ್ತು ಅಮೆರಿಕ ಒಂದಾದರೆ ಭಾರತದ ಈ ಸಾಮರ್ಥ್ಯ ಕೊನೆಗೊಳ್ಳುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ವಿಟೋ ಅಧಿಕಾರವಿಲ್ಲ. ಈ ಮೂವರು ಒಟ್ಟಿಗೆ ಬರುವುದರಿಂದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಹಿತಾಸಕ್ತಿಗಳಿಗೆ ತಡೆಯೊಡ್ಡುವುದು ಸುಲಭವಾಗುತ್ತದೆ. ಭಾರತ ತನ್ನ ವಿದೇಶಾಂಗ ನೀತಿಯನ್ನು ಬದಲಾಯಿಸಬೇಕಾಗಬಹುದು’.

ಆದರೆ, ದಕ್ಷಿಣ ಏಷ್ಯಾ ನೀತಿ ತಜ್ಞ ಮೈಕೆಲ್ ಕುಗೆಲ್​ವುನ್ ಅವರ ಅಭಿಪ್ರಾಯ ಭಿನ್ನವಾಗಿದೆ. ‘ಭಾರತ ಒಂದು ದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಮೂರೂ ದೇಶಗಳಿಗೆ ಭಾರತದ ಅಗತ್ಯ ಇದ್ದೇ ಇರುತ್ತದೆ. ಚೀನಾ-ಭಾರತ ಗಡಿ ವಿವಾದಗಳನ್ನು ಅವು ಪರಸ್ಪರ ಬಗೆಹರಿಸಿಕೊಳ್ಳುತ್ತವೆ. ರಷ್ಯಾ ಕೂಡ ಭಾರತದೊಂದಿಗೆ ಸ್ನೇಹವನ್ನು ಉಳಿಸಿಕೊಳ್ಳುತ್ತದೆ ಮತ್ತು ಅಮೆರಿಕಕ್ಕೂ ಭಾರತದ ಅಗತ್ಯವಿದೆ’ ಎಂದಿದ್ದಾರೆ.

ವೈಯಕ್ತಿಕ ಮಟ್ಟದಲ್ಲಿ ಮೂವರು ನಾಯಕರಿಗೆ ಒಳ್ಳೆಯ ಅಥವಾ ಕೆಟ್ಟ ಫಲಿತಾಂಶಗಳು ಬರಬಹುದು, ಆದರೆ ಜಗತ್ತಿನ ದೃಷ್ಟಿಯಿಂದ ಯಾವುದೇ ದೊಡ್ಡ ಬದಲಾವಣೆಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಸಭೆಯು ಸಾಂಕೇತಿಕವಾಗಿರುತ್ತದೆ. ರಷ್ಯಾ-ಯೂಕ್ರೇನ್ ಯುದ್ಧ ಮತ್ತು ಪರಮಾಣು ಶಸ್ತ್ರಾಸ್ತ್ರ ಒಪ್ಪಂದ ಎರಡರ ಮೇಲೂ ಒಮ್ಮತ ಮೂಡುವುದಿಲ್ಲ. ಮೂರೂ ದೇಶಗಳು ಸಮುದ್ರ ಮಾರ್ಗಗಳನ್ನು ಮುಕ್ತವಾಗಿಡುವುದು, ಪರಮಾಣು ಯುದ್ಧ ಮಾಡದಿರುವುದು ಮತ್ತು ಯುದ್ಧವನ್ನು ಕೊನೆಗೊಳಿಸುವಂತಹ ಕೆಲವು ಸಾಮಾನ್ಯ ವಿಷಯಗಳ ಬಗ್ಗೆ ಒಪ್ಪಿಗೆ ಸೂಚಿಸಲಿವೆ’ ಎಂದಿರುವ ತಜ್ಞರು, ಟ್ರಂಪ್ ತಮ್ಮ ಅಧಿಕಾರಾವಧಿಯ ಉಳಿದ ಎರಡು ವರ್ಷಗಳಲ್ಲಿ ತಮ್ಮದೊಂದು ಛಾಪು ಬಿಟ್ಟು ಹೋಗಲಿದ್ದಾರೆ. ಅವರು ಪುತಿನ್​ರೊಂದಿಗೆ ಸ್ನೇಹ ಬೆಳೆಸಿದರೆ, ಇಡೀ ಯುರೋಪ್ ಮೇಲೆ ಪರಿಣಾಮ ಬೀರುತ್ತದೆ. ಈ ಸ್ನೇಹದಿಂದ ಚೀನಾಕ್ಕೂ ಲಾಭವಾಗುತ್ತದೆ ಮತ್ತು ಭಾರತದ ವ್ಯಾಪಾರವೂ ಹೆಚ್ಚಾಗುತ್ತದೆ ಎಂದಿದ್ದಾರೆ.