accident in Toledo 
ವಿದೇಶ

ಸ್ಪೇನ್​ನಲ್ಲಿ ಭಾರೀ ರೈಲು ದುರಂತ; 2 ಹೈಸ್ಪೀಡ್​ ರೈಲುಗಳು ನಡುವೆ ಡಿಕ್ಕಿ; 39 ಜನರು ಮೃತ, ಹಲವರಿಗೆ ಗಂಭೀರ ಗಾಯ..Spain

  • ಸ್ಪೇನ್​ನಲ್ಲಿ ಎರಡು ಹೈಸ್ಪೀಡ್​ ರೈಲುಗಳು ಡಿಕ್ಕಿ, 39 ಜನರು ಸಾವು

  • ಮ್ಯಾಡ್ರಿಡ್, ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ನಡುವಿನ ರೈಲು ಸೇವೆ ಸ್ಥಗಿತ

  • ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ, ತುರ್ತು ಸೇವೆ ಸಲ್ಲಿಸಲು ಸೂಚಿಸಿದ ಸ್ಪ್ಯಾ ನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್

ಟೊಲೆಡೊ: ಸ್ಪೇನ್​ನ ಮಧ್ಯಪ್ರಾಂತ್ಯದ ಟೊಲೆಡೊದಲ್ಲಿ ಎರಡು ಹೈಸ್ಪೀಡ್​ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ, 39 ಜನರು ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ. ಹಲವರಿಗೆ ಗಾಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆಯ ನಂತರ ಮ್ಯಾಡ್ರಿಡ್, ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು.

ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು, ರಕ್ಷಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ವೈದ್ಯಕೀಯ ತಂಡ ಮೊಕ್ಕಾಂ ಹೂಡಿವೆ ಎಂದು ಸ್ಪೇನ್​ನ ಮೂಲ ಸೌಕರ್ಯ ನಿರ್ವಾಹನ ಎಡಿಐಎಫ್​​ ಮಾಹಿತಿ ಹಂಚಿಕೊಂಡಿದೆ.

ಒಂದೇ ದಿಕ್ಕಿನಲ್ಲಿ ಪ್ರಯಾಣ

'ಮ್ಯಾಡ್ರಿಡ್​ ಸೆವಿಲ್ಲೆಯ ಒಂದೇ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೆನ್ಫೆ ಮತ್ತು ಇರಿಯೊ ಹೈಸ್ಪೀಡ್​ ರೈಲಿನ ಎರಡು ಬೋಗಿ ಒಂದಕ್ಕೊಂದು ಹಿಂದಿನಿಂದ ಡಿಕ್ಕಿ ಹೊಡೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ' ಎಂದು ಲಾ ಮಂಚಾ ಪ್ರಾದೇಶಿಕ ಸರ್ಕಾರ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಕ್ಯಾಸ್ಟಿಲ್ಲಾ ಲಾ ಮಂಚ ಪ್ರದೇಶದ ವಕ್ತಾರೆ ಎಸ್ತರ್ ಪಡಿಲ್ಲಾ ಮಾತನಾಡಿ, ಇರಿಯೋ ರೈಲಿನಲ್ಲಿ ಮಗು ಸೇರಿದಂತೆ 147 ಜನರು ಪ್ರಯಾಣಿಸುತ್ತಿದ್ದರು. ಇನ್ನೂ397 ಮಂದಿ ರೆನ್ಫೆಯಲ್ಲಿದ್ದರು. ಎರಡು ಹೈ ಸ್ಪೀಡ್​ ರೈಲುಗಳು ಹಳಿ ತಪ್ಪಿ ಡಿಕ್ಕಿ ಹೊಡೆದುಕೊಂಡ ಪರಿಣಾಮ, ಬೋಗಿಗಳು ನೆಲಕ್ಕುರುಳಿದವು. ಇಲ್ಲಿಯವರೆಗೂ ಘಟನೆಯಿಂದಾಗಿ 39 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಸ್ಪ್ಯಾ ನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್

ಎರಡು ರೈಲುಗಳ ಡಿಕ್ಕಿ ಹೊಡೆದ ಘಟನೆ ಕೇಳಿ ಅಘಾತಕ್ಕೊಳಗಾಗಿದ್ದೇನೆ. ಸದ್ಯ ನಾನು ಸಾರಿಗೆ ಸಚಿವ ಮತ್ತು ಕ್ಯಾಸ್ಟಿಲ್ಲಾ-ಲಾ ಮಂಚದ ಅಧ್ಯಕ್ಷರೊಂದಿಗೆ ಸಂಪರ್ಕದಲ್ಲಿದ್ದು, ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಸಂತ್ರಸ್ತರಿಗೆ ಅಗತ್ಯ ತುರ್ತು ಸೇವೆ ನೀಡಲು..ಸುರಕ್ಷತೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಹಾಗೂ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದೇನೆ. ಮೃತ ಕುಟುಂಬಸ್ಥರೊಟ್ಟಿಗೆ ನಾವಿದ್ದೇವೆ ಎಂದು ಸ್ಪ್ಯಾ ನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋ ವೈರಲ್​

ಎರಡು ಹೈಸ್ಪೀಡ್​ ರೈಲುಗಳು ಡಿಕ್ಕಿ ಹೊಡೆದು, ಬೋಗಿ ಕೆಳಕ್ಕೆ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ಥಳದಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಗಾಯಗೊಂಡು ಬದುಕುಳಿದ ಜನರನ್ನು ರಕ್ಷಿಸುತ್ತಿದ್ದಾರೆ. ಮೃತ ದೇಹಗಳನ್ನು ರೈಲಿನಿಂದ ಹೊರ ತೆಗೆಯುತ್ತಿರುವ ದೃಶ್ಯವು ವಿಡಿಯೋದಲ್ಲಿ ಇದೆ, (ಏಜೆನ್ಸೀಸ್).