Gurdeep Singh New York 
ವಿದೇಶ

ಪಿಜ್ಜಾ ಡೆಲಿವರಿ ಮಾಡುತ್ತಿದ್ದ ವೇಳೆ ಫೈರಿಂಗ್; ಮನೆಯ ಏಳಿಗೆಗಾಗಿ, ಸಾಲ ಮಾಡಿ ಅಮೆರಿಕಕ್ಕೆ ತೆರಳಿದ್ದ ಯುವಕ ಸಾವು ..New York

ಪ್ರಮುಖ ಮುಖ್ಯಾಂಶಗಳು

  • ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಪಂಜಾಬ್ ಮೂಲದ ಯುವಕನ ಮೇಲೆ ಗುಂಡಿನ ದಾಳಿ.
  • ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಗುರ್ದೀಪ್ ಸಿಂಗ್ ಗುಂಡೇಟಿಗೆ ಬಲಿ.
  • ಕುಟುಂಬದ ಆರ್ಥಿಕ ಸುಧಾರಣೆಗಾಗಿ 13 ವರ್ಷಗಳ ಹಿಂದೆ ಸಾಲ ಮಾಡಿ ಅಮೆರಿಕಕ್ಕೆ ತೆರಳಿದ್ದ ಯುವಕ.

28 year old Punjab Man Shot Dead While Delivering Pizza In New York:

ಕುಟುಂಬದ ಆರ್ಥಿಕ ಏಳಿಗೆಯಾಗಬೇಕು ಎನ್ನುವ ಕನಸ್ಸನ್ನು ಹೊತ್ತು, ಸಾಲ ಮಾಡಿ ಅಮೆರಿಕಕ್ಕೆ ಕೆಲಸಕ್ಕೆಂದು ತೆರಳಿದ್ದ 28 ವರ್ಷದ ಪಂಜಾಬ್​ನ ಯುವಕ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಘಟನೆ ಬೆಳಿಗೆ ಬಂದಿದೆ. ಯುವಕನ ಸಾವಿನಿಂದಾಗಿ ಆತನ ಸ್ವಗ್ರಾಮದಲ್ಲಿ ಮೌನ ಮಡುಗಟ್ಟಿದೆ.

ಮೃತರನ್ನು ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಬೆಗೋವಾಲ್ ಸಮೀಪದ ಜಬ್ಬೋವಾಲ್ ಗ್ರಾಮದ 28 ವರ್ಷದ ಗುರ್ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ಯಾರು ಗುರ್ದೀಪ್

'ಗುರ್ದೀಪ್ ಸಿಂಗ್ ತಮ್ಮ ಕುಟುಂಬಕ್ಕೆ ಉತ್ತಮ ಭವಿಷ್ಯ ಕಲ್ಪಿಸುವ ಆಸೆಯಿಂದ 13 ವರ್ಷಗಳ ಹಿಂದೆ ಸಾಲ ಮಾಡಿ ಅಮೆರಿಕಕ್ಕೆ ತೆರಳಿದ್ದ. ಅಮೆರಿಕ ತಲುಪಿದ ಬಳಿಕ ಆರಂಭದಲ್ಲಿ ಅವರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದ. ಕುಟುಂಬಕ್ಕೆ ಆಸರೆಯಾಗಲು ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಈಗ ನಮಗೆ ದಿಕ್ಕು ಯಾರು' ಎಂದು ಮೃತರ ತಂದೆ ಪ್ಯಾರಾ ಲಾಲ್ ತಿಳಿಸಿದ್ದಾರೆ.

ದರೋಡೆ ವೇಳೆ ಘಟನೆ ನಡೆದ ಶಂಕೆ

ಈ ಗುಂಡಿನ ದಾಳಿ ದರೋಡೆ ವೇಳೆ ದುಷ್ಕರ್ಮಿಗಳು ನಡೆಸಿರಬಹುದು ಎಂದು ನ್ಯೂಯರ್ಕ್​ನ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಿಂದಷ್ಟೇ ಹೆಚ್ಚಿನ ವಿವರಗಳು ಹೊರಬರಬೇಕಿವೆ ಎನ್ನಲಾಗಿದೆ. ಸದ್ಯ ಜಬ್ಬೋವಾಲ್ ಗ್ರಾಮದಲ್ಲಿ ಶೀಘ್ರದಲ್ಲೇ ಮೌನ ಮಡುಗಟ್ಟಿದೆ
ತಮ್ಮ ಮಗನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಸಹಾಯ ಮಾಡುವಂತೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಅಮೆರಿಕದ ಅಧಿಕಾರಿಗಳು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸರ್ಕಾರವನ್ನು ಕೋರಿದ್ದಾರೆ, (ಏಜೆನ್ಸೀಸ್).