ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯಲ್ಲಿದ್ದ ಎರಡು ಸೇಬು ಹಣ್ಣು ಮತ್ತು ಒಂದು ಹ್ಯಾಂಡ್ವಾಶ್ ಬಾಟಲಿ ಕಳುವಾಗಿರುವ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದು ದೇಶದಲ್ಲಿ ನಡೆದ ಅತ್ಯಂತ ವಿಚಿತ್ರ ಕಳ್ಳತನ ಪ್ರಕರಣ ಎಂದು ಬಣ್ಣಿಸಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೂರ್ ಮೊಹಮ್ಮದ್ ಬಿಸ್ಮಲ್ ಸೂಚನೆಯ ಮೇರೆಗೆ ಈ ಎಫ್ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ನ್ಯಾಯಾಧೀಶರ ಕೊಠಡಿಯಿಂದ ಕಳುವಾದ ಎರಡು ಸೇಬುಗಳು ಮತ್ತು ಹ್ಯಾಂಡ್ವಾಶ್ ಬಾಟಲಿಯ ಒಟ್ಟು ಮೌಲ್ಯ ಸುಮಾರು 1,000 ರೂ. ಎಂದು ಅಂದಾಜಿಸಲಾಗಿದೆ.
ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 380ರ ಪ್ರಕಾರ ತಪ್ಪಿತಸ್ಥರಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.