ವಿದೇಶ

ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ; 18 ಮಂದಿ ಸಾವು, 46ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ..Earthquake In Tibet

  • ಟಿಬೆಟ್ ಪ್ರದೇಶದಲ್ಲಿ ಗುರುವಾರ ರಾತ್ರಿ 7.0 ತೀವ್ರತೆಯ ಭೂಕಂಪನ

  • 18 ಜನರು ಸಾವನಪ್ಪಿದ್ದು 46ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮಾಹಿತಿ

  • 339 ಮನೆಗಳು , ರೆಸ್ಟೋರೆಂಟ್​ನಲ್ಲಿದ್ದ ವಸ್ತುಗಳು ಭೂಕಂಪಕ್ಕೆ ನಾಶ

Earthquake In Tibet: ಅ.22ರಂದು ಚೀನಾದ ಟಿಬೆಟ್​​ನಲ್ಲಿ ಸಂಭವಿಸಿದ 7.0 ತೀವ್ರತೆಯ ಭೂಕಂಪದಿಂದಾಗಿ 18 ಜನರು ಸಾವನ್ನಪ್ಪಿದ್ದಾರೆ. 46ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಗುರುವಾರ ರಾತ್ರಿ ಸುಮಾರು 10:33 ಕ್ಕೆ ಭೂಕಂಪನ ಸಂಭವಿಸಿದೆ. ನಾಕ್ವ ಪೂರ್ವ-ಈಶಾನ್ಯದಿಂದ ಭೂಕಂಪನದ ಕೇಂದ್ರ ಬಿಂದುವಾಗಿ ಗುರಿತಿಸಲಾಗಿದೆ. ನಗರದಿಂದ ಪೂರ್ವ-ಈಶಾನ್ಯಕ್ಕೆ ಸುಮಾರು 190 ಕಿಲೋಮೀಟರ್ (120 ಮೈಲಿ) ಹಾಗೂ ಪ್ರಾದೇಶಿಕ ರಾಜಧಾನಿ ಲಾಹಾಸಾದಿಂದ 390 ಕಿಲೋಮೀಟರ್ ಈಶಾನ್ಯಕ್ಕೆ ಪರ್ವತ ಪ್ರದೇಶದಲ್ಲಿದೆ.

ಚೀನಾ ಸೆಂಟ್ರಲ್ ಟೆಲಿವಿಷನ್ ಸ್ಥಳೀಯ ಅಧಿಕಾರಿಗಳ ಪ್ರಕಾರ, 46 ಮಂದಿ ಗಾಯಗೊಂಡಿದ್ದು, ಅವರಲ್ಲಿ 11 ಮಂದಿ ಸ್ಥಿತಿ ಗಂಭೀರವಾಗಿದೆ. 339 ಮನೆಗಳು ಕುಸಿದಿವೆ. ಪ್ರಾಥಮಿಕ ತನಿಖೆ ಪ್ರಕಾರ 339 ಮನೆಗಳು ಹಾನಿಗೀಡಾಗಿರುವುದು ದೃಢಪಟ್ಟಿದ್ದು, ಅವಶೇಗಳಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದೆ. ರಕ್ಷಣಾ ಕಾರ್ಯಚರಣೆಗೆ ಸಹಾಯ ಮಾಡಲು 300 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ದೃಶ್ಯಗಳು ವೈರಲ್​

ಭೂ ಕಂಪಿಸುತ್ತಿದ್ದಂತೆ ರೆಸ್ಟೋರೆಂಟ್​​ನಲ್ಲಿದ್ದ ಉದ್ಯೋಗಿಗಳು ಚೆಲ್ಲಾಪಿಲ್ಲಿಯಾಗಿ ಓಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೂಪರ್‌ಮಾರ್ಕೆಟ್‌ಗಳಲ್ಲಿ ಶೆಲ್ಫ್‌ಗಳಿಂದ ವಸ್ತುಗಳು ಕೆಳಗೆ ಬೀಳುತ್ತಿರುವ ದೃಶ್ಯವು ಸೋಶಿಯಲ್​ ಮೀಡಿಯಾದಲ್ಲಿ ಇದೆ.

ಈ ಹಿಂದೆ ನಡೆದ ಘಟನೆಗಳು

2025ರ ಜನವರಿಯಲ್ಲಿ ಟಿಬೆಟ್‌ನ ಗ್ರಾಮೀಣ ಟಿಂಗ್ರಿ ಕೌಂಟಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 126 ಜನರು ಪ್ರಾಣ ಕಳೆದುಕೊಂಡಿದ್ದರು. ಆಗಸ್ಟ್‌ನಲ್ಲಿ ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸಿದ ಪರಿಣಾಮ 1,400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸಾಕಷ್ಟು ಮನೆಗಳು, ಮರ-ಗಿಡ ಆಸ್ತಿ-ಪಾಸ್ತಿ ನಾಶವಾಗಿತ್ತು.

ಇದೇ ವೇಳೆ, ರಾಷ್ಟ್ರೀಯ ಭೂಕಂಪನ ಕೇಂದ್ರ (NCS) ತಿಳಿಸಿದಂತೆ ರಾತ್ರಿ 8:29 ರ ಸುಮಾರಿಗೆ (IST) ಚೀನಾದಲ್ಲಿ ಮತ್ತೊಂದು 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಅರುಣಾಚಲ ಪ್ರದೇಶದ ಪಾಂಗಿನ್‌ನಿಂದ ಸುಮಾರು 505 ಕಿ.ಮೀ ಉತ್ತರ-ಉತ್ತರ-ಪಶ್ಚಿಮಕ್ಕೆ 15 ಕಿ.ಮೀ ಆಳದಲ್ಲಿ ಸಂಭವಿಸಿದೆ, (ಏಜೆನ್ಸೀಸ್)