International Yoga Day: ವಿಶ್ವಾದ್ಯಂತ ಉದ್ವಿಗ್ನತೆ, ಅಸ್ಥಿರತೆ ಮತ್ತು ಅಶಾಂತಿ ಹೆಚ್ಚುತ್ತಿರುವ ಸಮಯದಲ್ಲಿ, ಯೋಗವು ಮಾನವೀಯತೆಗೆ ಶಾಂತಿಯ ಹಾದಿಯನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:ಶನಿ ಪಥ ಬದಲಾವಣೆ: ಈ 3 ರಾಶಿಯವರಿಗೆ ಸಂಕಷ್ಟಗಳು ದೂರವಾಗಲಿದ್ದು, ಇನ್ಮುಂದೆ ಅದೃಷ್ಟವೋ ಅದೃಷ್ಟ! | Zodiac Signs
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಶನಿವಾರ ಏರ್ಪಡಿಸಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗವು ಮಾನವೀಯತೆಗೆ ಅಗತ್ಯವಿರುವ 'ವಿರಾಮ ಗುಂಡಿ'ಯಾಗಿದೆ. ಇದು ನಮಗೆ ಉಸಿರಾಡಲು ಅನುವು ಮಾಡಿಕೊಡುತ್ತದೆ, ಸಮತೋಲನವನ್ನು ಒದಗಿಸುತ್ತದೆ ಮತ್ತು ಮಾನವೀಯತೆಯನ್ನು ಮತ್ತೆ ಸಮಗ್ರವಾಗಿ ನಿರ್ಮಿಸುವ ಮಾರ್ಗವನ್ನು ತೋರಿಸುತ್ತದೆ ಎಂದರು.
11 ವರ್ಷಗಳಲ್ಲಿ, ಯೋಗವು ಈಗ ಪ್ರಪಂಚದಾದ್ಯಂತದ ಕೋಟ್ಯಂತರ ಜನರ ಜೀವನಶೈಲಿಯ ಭಾಗವಾಗಿದೆ. ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಕಡಿಮೆ ಸಮಯದಲ್ಲಿ 175 ದೇಶಗಳು ಅಂಗೀಕರಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು.