ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಆರೋಗ್ಯ, ಕ್ಷೇಮ ಮತ್ತು ಸಮಗ್ರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.  
ನ್ಯೂಸ್

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಆರೋಗ್ಯ, ಕ್ಷೇಮ ಮತ್ತು ಸಮಗ್ರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಯೋಗ ದಿನಾಚರಣೆಯ ಮುನ್ನಾದಿನವಾಗಿ, ಬಂದರು ಪ್ರಾಧಿಕಾರವು ಇಡೀ ವಾರ ಹಡಗುಗಳ ಮೇಲ್ಭಾಗ, ವಾರ್ಫ್ (ಡಾಕ್) ಮತ್ತು ಅಂತರರಾಷ್ಟ್ರೀಯ ಕ್ರೂಸ್ ಲಾಂಜ್‌ಗಳಂತಹ ವಿಶಿಷ್ಟ ಕಡಲ ಸ್ಥಳಗಳಲ್ಲಿ ವಿಶೇಷ ಯೋಗ ಶಿಬಿರಗಳನ್ನು ಆಯೋಜಿಸಿತ್ತು. ಇದು ಕಡಲ ವೃತ್ತಿಪರರಲ್ಲಿ ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿರ್ವಹಣೆಯ ಜಾಗೃತಿ ಮೂಡಿಸಲು ನೆರವಾಯಿತು.
ಎನ್‌ಎಂಪಿಎ ಉಪಾಧ್ಯಕ್ಷರಾದ ಎಸ್. ಶಾಂತಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಬಂದರಿನ ಪ್ರಮುಖ ಅಧಿಕಾರಿಗಳಾದ ಜಿಜೋ ಥಾಮಸ್, ವೀರರಾಘವನ್, ದೀಪಕ್ ರಾಥ್, ಕೆ. ರಾಜೇಂದ್ರ ಕುಮಾರ್, ಸುಲೇಖಾ ಹೊಸಕೇರಿ ಹಾಗೂ ಸಿಐಎಸ್‌ಎಫ್ ಉಪ ಕಮಾಂಡೆಂಟ್ ರಾಜೇಂದ್ರ ಪಿ. ಪಾಠಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಂದರು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಯೋಗ ಅವಧಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ, ಸಿಐಎಎಸ್‌ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು ಯೋಗ ಶಿಕ್ಷಕ ಕಿಶೋರ್ ಸುವರ್ಣ ಅವರ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮಗಳನ್ನು ಪ್ರದರ್ಶಿಸಿದರು.