ನ್ಯೂಸ್

ಸೂಪರ್ ಮಾರ್ಕೆಟ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಗಲಾಟೆ! ಬೆಂಗಲಿಗರನ್ನ ಕರೆಸಿ ಹಲ್ಲೆ?

ವಿಜಯಪುರ: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ಸೂಪರ್​ ಮಾರ್ಕೆಟ್​ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ಇದೇನಾ ಸಭ್ಯತೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ನಗರದ ಸೋಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್​ಗೆ ಶನಿವಾರ(ನ.26) ಸ್ನೇಹಿತೆಯೊಂದಿಗೆ ಕಾಸ್ಮೆಟಿಕ್ ಖರೀದಿಸಲೆಂದು ರಾಜೇಶ್ವರಿ ಗಾಯಕ್ವಾಡ್ ತೆರಳಿದ್ದರು. ಕಾಸ್ಮೆಟಿಕ್ ವಸ್ತುಗಳ ಪರಿಶೀಲನೆ ವೇಳೆ ಸೂಪರ್ ಮಾರ್ಕೆಟ್ ಸಿಬ್ಬಂದಿಗೂ ರಾಜೇಶ್ವರಿಗೂ ವಾಗ್ವಾದ ನಡೆದಿದೆ.

ಬಳಿಕ ಸೂಪರ್ ಮಾರ್ಕೆಟ್​ಗೆ ಬಂದ 8-10 ಮಂದಿ ಮಾಲೀಕ ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ನಡೆಸಿದ್ದಾರೆ. ಸಿಟ್ಟಿಗೆದ್ದ ರಾಜೇಶ್ವರಿಯೇ ಬೆಂಬಲಿಗರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಅಂಗಡಿ ಮಾಲೀಕ ದೂರಿದ್ದಾರೆ. ಶನಿವಾರ ಸಂಜೆಯೇ ಈ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾದ ಗಲಾಟೆಯ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.

ಇನ್ನು ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ರಾಜೇಶ್ವರಿ, ಉಮದಿ ಸೂಪರ್ ಮಾರ್ಕೆಟ್​ಗೆ ನಾನು ಹೋಗಿದ್ದು ನಿಜ. ಆದರೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ‌ ಎಂದಿದ್ದಾರೆ.