ಕೆನರಾ ಬ್ಯಾಂಕ್ ಕನ್ನಡ ಸಂಘದಿಂದ ಅಂತರ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆ admin
ನ್ಯೂಸ್

ಅಂತರ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆಗೆ ಆಹ್ವಾನ

ಕೆನರಾ ಬ್ಯಾಂಕ್ ಕನ್ನಡ ಸಂಘದ ಆಯೋಜನೆ

ಬೆಂಗಳೂರು : 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆನರಾ ಬ್ಯಾಂಕ್ ಕನ್ನಡ ಸಂಘವು ಅಂತರ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದೆ. ಕನ್ನಡ ಭಾವಗೀತೆ, ಚಿತ್ರಗೀತೆ, ಅಂತ್ಯಾಕ್ಷರಿ ಮತ್ತು ರಸಪ್ರಶ್ನೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ದೆಗಳನ್ನು ಆಯೋಜಿಸಿರುವುದಾಗಿ ಕೆನರಾ ಬ್ಯಾಂಕ್ ಡಿಜಿಎಂ ಹರೀಶ್ ತಿಳಿಸಿದ್ದಾರೆ.

ಜೆ.ಸಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ನ.15 (ಭಾನುವಾರ) ರಂದು ಬೆಳಗ್ಗೆ 9 ಗಂಟೆಯಿಂದ ಸ್ಪರ್ಧೆಗಳು ನಡೆಯಲಿದ್ದು, ರಾಷ್ಟ್ರೀಕೃತ, ಷೆಡ್ಯೂಲ್ಡ್, ಸಹಕಾರಿ ಎಲ್ಲ ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಳ್ಳಬಹುದು. ಆಯ್ಕೆಯಾದ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ನ.16 (ಸೋಮವಾರ) ಸಂಜೆ 5 ಗಂಟೆಯಿಂದ ಕೆನರಾ ಬ್ಯಾಂಕ್ ಉದ್ಯೋಗಿಗಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ಎಲ್ಲ ಸ್ಪರ್ಧೆಗಳಿಗೂ ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ ದೂ.98862 77983 ಸಂಪರ್ಕಿಸಬಹುದು.