ನವದೆಹಲಿ: ಬಿಬಿಸಿ ಏಷ್ಯನ್ ನೆಟ್ವರ್ಕ್ ಆಯೋಜಿಸಿದ್ದ ‘ಬಿಗ್ ಡಿಬೇಟ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸಿದ್ದು, ಟ್ವಿಟರ್ನಲ್ಲಿ #BoycottBBC ಮತ್ತು #BanBBC ಟ್ರೆಂಡ್ ಆಗಿದೆ.
ಸೋಮವಾರ ಪ್ರಸಾರವಾಗಿದ್ದ ಈ ಕಾರ್ಯಕ್ರಮಕ್ಕೆ ಪ್ರಿಯಾ ರೈ ನಿರೂಪಕಿಯಾಗಿದ್ದರು. ಬ್ರಿಟಿಷ್ ಸೋಪ್ ಒಪೇರಾ ‘ಈಸ್ಟೆಂಡರ್ಸ್’ನ ಎಪಿಸೋಡ್ ಇದಾಗಿದ್ದು, ‘ಸಿಖ್ ಟರ್ಬಾನ್’ ಅನ್ನು ‘ಕಿರೀಟ’ಕ್ಕೆ ಹೋಲಿಸುತ್ತಿರುವ ಬಗ್ಗೆ ಷೋ ನಡೆದಿತ್ತು.
ಮೂರು ಗಂಟೆ ಕಾರ್ಯಕ್ರಮದಲ್ಲಿ ಬ್ರಿಟನ್ನಲ್ಲಿರುವ ಸಿಖ್ ಸಮುದಾಯದವರು ಖುಷಿಯಿಂದ ಭಾಗವಹಿಸಿದ್ದರು. ಇದೇ ವೇಳೆ ನಿರೂಪಕಿ ಅನೇಕ ಶ್ರೋತೃಗಳ ಕರೆಯನ್ನು ಸ್ವೀಕರಿಸಿದ್ದರು. ಈ ಕರೆಗಳ ನಡುವೆ ಸೈಮನ್ ಎಂಬ ಹೆಸರಿನ ಶ್ರೋತೃ ಕರೆ ಮಾಡಿದ್ದು, ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಬಗ್ಗೆ ಅವಹೇಳನ ಮಾಡಿದ್ದಾರೆ. ಈ ಕ್ಲಿಪಿಂಗ್ ವೈರಲ್ ಆಗಿದ್ದು ತೀವ್ರ ಆಕ್ಷೇಪ ವ್ಯಕ್ತವಾಗಿದೆ.