ನ್ಯೂಸ್

ಕೋಳಿ ತುಂಬಿದ್ದ ವಾಹನ ಪಲ್ಟಿ; ಗಾಯಗೊಂಡ ಚಾಲಕನನ್ನು ಉಳಿಸುವ ಬದಲು ಕೋಳಿ ಕದ್ದು ಓಡುತ್ತಿರುವ ಜನ!: ವಿಡಿಯೋ ನೋಡಿ.. |Chickens

Chickens: ಕೋಳಿ ತುಂಬಿದ್ದ ವಾಹನವೊಂದು(ಪಿಕ್​​ಆಪ್​​ ಟ್ರಕ್​​) ಅಯಾತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಟ್ರಕ್​ ಚಾಲಕ ಗಾಯಗೊಂಡಿದ್ದಾನೆ. ಆದರೆ, ಅಲ್ಲಿದ್ದ ಜನರು ಚಾಲಕನಿಗೆ ಚಿಕಿತ್ಸೆ ಕೊಡಿಸುವ ಬದಲಾಗಿ ವಾಹನದಲ್ಲಿದ್ದ ಕೋಳಿಗಳನ್ನು ಹೊತ್ತೊಯ್ಯುವಲ್ಲಿ ನಿರತರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಈ ಅಪರೂಪದ ಘಟನೆ ಛತ್ತಿಸ್​​ಘಡದ ಬೆಮೆತಾರಾ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.

ಮೂರು ದಿನಗಳ ಹಿಂದೆ ದುರ್ಗ್ ವಿಭಾಗದ ಬೆಮೆತಾರಾ ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಕೋಳಿಗಳನ್ನು ತುಂಬಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಉರುಳಿಬಿದ್ದಿದೆ. ವಾಹನ ಉರುಳಿದ ತಕ್ಷಣ ಜನರು ಅಲ್ಲಿಗೆ ತಲುಪಿ ಗಾಯಗೊಂಡ ಚಾಲಕನನ್ನು ಉಳಿಸುವ ಬದಲು ಕೋಳಿಗಳನ್ನು ಲೂಟಿ ಮಾಡಲು ಆರಂಭಿಸಿದ್ದಾರೆ.

ಬೆಮೆತಾರಾ ಜಿಲ್ಲೆಯ ನಂದಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ತೆಮ್ರಿ ಗ್ರಾಮದ ಬಳಿ ಕೋಳಿಗಳಿಂದ ತುಂಬಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರು ಕೋಳಿಗಳನ್ನು ಲೂಟಿ ಮಾಡುವಲ್ಲಿ ಎಷ್ಟು ಕಾರ್ಯನಿರತರಾದರು ಎಂದರೆ ಗಾಯಗೊಂಡ ಚಾಲಕನಿಗೆ ಸಹಾಯ ಕೂಡ ಮಾಡಲಿಲ್ಲ ಎಂದು ವರದಿಯಾಗಿದೆ.

ಈ ವಿಷಯದಲ್ಲಿ ಚಾಲಕ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)