ನ್ಯೂಸ್

ವಿಶ್ವದ ಬಹುತೇಕ ದೇಶಗಳಲ್ಲಿ Tik Tok ಬಂದ್; ಅದರ ಬದಲಾಗಿ ಹೊಸ ರೀಲ್ಸ್​ ಆ್ಯಪ್​ ತರಲು ಮುಂದಾದ Instagram!

Tik Tok:ಚೀನಾದ ಎಂಟ್ರೈನ್​ಮೆಂಟ್​ ದೈತ್ಯ ಟಿಕಾಟಾಕ್​(TikTok) ಇದೀಗ ಅಮೆರಿಕಾದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಹೀಗಾಗಿ, ಇದರ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಇನ್​ಸ್ಟಾಗ್ರಾಮ್​(Instagram) ರೀಲ್ಸ್​ಗಾಗಿ ಹೊಸ ಆ್ಯಪ್​ ಅನ್ನು ಸಿದ್ದಪಡಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಅಮೆರಿಕ ಸರ್ಕಾರದ ಬೇಡಿಕೆಗಳನ್ನು ಪಾಲಿಸದಿದ್ದರೆ ಟಿಕ್‌ಟಾಕ್ ಅನ್ನು ಅಮೆರಿಕದಲ್ಲಿ ನಿಷೇಧಿಸುವ ಸಾಧ್ಯತೆ ಹೆಚ್ಚಿದೆ. ಈಗ, ಪ್ರತಿಸ್ಪರ್ಧಿ ನೇತಾಡುತ್ತಿರುವುದರಿಂದ ಇನ್‌ಸ್ಟಾಗ್ರಾಮ್ ತನ್ನ ಕಿರು-ರೂಪದ ವೀಡಿಯೊ ವೈಶಿಷ್ಟ್ಯವಾದ ರೀಲ್ಸ್‌ಗೆ ಮೀಸಲಾಗಿರುವ ಪ್ರತ್ಯೇಕ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಬುಧವಾರ(ಫೆ.26) ದಿ ಇನ್‌ಫಾರ್ಮೇಶನ್ ವರದಿ ಮಾಡಿದಂತೆ, ಅದರ ಮುಖ್ಯಸ್ಥ ಆಡಮ್ ಮೊಸ್ಸೆರಿ ಈ ವಾರ ಸಿಬ್ಬಂದಿಗೆ ಸಭೆ ಮಾಡಿದ್ದಾರೆ. ಇನ್ನು ಇದರ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಿಕ್‌ಟಾಕ್ ಉಪಸ್ಥಿತಿಯ ಅನಿಶ್ಚಿತತೆಯನ್ನು ಲಾಭ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಈ ಹಿಂದೆ ಕೂಡ ಹೊಸ ಪ್ರಯತ್ನ ಕೈ ಹಾಕಿದ್ದ Instagram

ಇನ್ನು ಮೇಟಾದ ಇನ್​ಸ್ಟಾಗ್ರಾಮ್​ ಇಂತಹ ಹೆಜ್ಜೆ ಇಡುತ್ತಿರುವುದು ಇದೇ ಮೊದಲಲ್ಲ. ಜನವರಿ ಆರಂಭದಲ್ಲಿ ಮೇಟಾ ಎಡಿಟ್ಸ್​ ಎಂಬ ಹೊಸ ವಿಡಿಯೋ-ಎಡಿಟಿಂಗ್ ಆ್ಯಪ್ಲಿಕೇಶನ್​ನನ್ನು ಪರಿಚಯಿಸಿತು. ಅಲ್ಲದೆ, 2018ರಲ್ಲಿ ಮೇಟಾ, ಟಿಕ್​ಟಾಕ್​ನೊಂದಿಗೆ ಪ್ರತಿಸ್ಪರ್ಧಿಸುವ ನಿಟ್ಟಿನಲ್ಲಿ ಲಾಸ್ಸೊ ಎಂಬ ಸ್ವಾತಂತ್ರ ಆ್ಯಪ್​ ಅನ್ನು ಬಿಡುಗಡೆ ಮಾಡಿತು. ಅದಾಗ್ಯೂ, ಅಪ್ಲಿಕೇಶನ್ ಆಕರ್ಷಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ ಲಾಸ್ಸೊ ಆ್ಯಪ್ಲಿಕೇಶನ್​ ಅನ್ನು ಮುಚ್ಚಲಾಯಿತು.

ಅಮೆರಿಕದಲ್ಲಿ Tik Tok ಬಂದ್‌ಗೆ ಕಾರಣ?

ಇನ್ನೂ ಎಲ್ಲರಿಗೂ ತಿಳಿದಿರುವಂತೆ ಟಿಪ್ಟಾಕ್ ಆಪ್ಲಿಕೇಶನ್ ಚೀನಾಮೂಲದ ಕಂಪನಿ ಬೈಟ್ ಡ್ಯಾನ್ಸ್. ಟಿಕ್‌ಾಕ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುತ್ತದೆ ಎಂದು ಯುಎಸ್‌ ನ ಅಧಿಕಾರಿಗಳು ಪದೇಪದೆ ಎಚ್ಚರಿಸಿದ್ದಾರೆ. ಏಕೆಂದರೆ ಚೀನಾ ಸರ್ಕಾರವು ಅಮೆರಿಕನ್ನರ ಮೇಲೆ ಕಣ್ಣಿಡಲು ಅಥವಾ ಕೆಲವು ವಿಷಯವನ್ನು ಸಂಗ್ರಹಿಸಲು ಅಥವಾ ನಿಗ್ರಹಿಸುವ ಮೂಲಕ ದೇಶದಲ್ಲಿ ಸಾರ್ವಜನಿಕರ ಮೇಲೆ ರಹಸ್ಯವಾಗಿ ಪ್ರಭಾವ ಬೀರುವ ಅಸ್ತ್ರವಾಗಿ ಟಿಕ್‌ಟಾಕ್ ಅನ್ನು ಬಳಸಬಹುದು ಎಂಬ ಗುಮಾನಿ ಇದೆ.

ಅಲ್ಲದೆ, ಚೀನಾದೊಂದಿಗೆ ಟಿಕ್‌ಟಾಕ್‌ನ ಸಂಬಂಧಗಳು ರಾಷ್ಟ್ರೀಯ ಭದ್ರತೆಗೆ ಒಡ್ಡುವ ಅಪಾಯಗಳ ಬಗ್ಗೆ ಯುಎಸ್ ಶಾಸಕರು ಮತ್ತು ಅಧಿಕಾರಿಗಳು ವರ್ಷಗಳಿಂದ ಎಚ್ಚರಿಕೆ ನೀಡಿದ್ದರು. ಟಿಪ್ಟಾಕ್‌ನ ಚೀನೀ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಅನ್ನು ಅಪ್ಲಿಕೇಶನ್‌ನಲ್ಲಿ ತನ್ನ ಪಾಲನ್ನು US ಮಾರುಕಟ್ಟೆಯಿಂದ ಮಾರಾಟ ಮಾಡಲು ಅಥವಾ ಕಡಿತಗೊಳಿಸುವಂತೆ ಕಳೆದ ವರ್ಷ ಅಲ್ಲಿನ ವಿರೋಧ ಪಕ್ಷ ಒತ್ತಾಯಿಸಿತ್ತು.(ಏಜೆನ್ಸೀಸ್​)