ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಸಂಸದ ಎಂ.ಮಲ್ಲೇಶ್​ ಬಾಬು ರಸ್ತೆ ಪರಿಶೀಲಿಸಿದರು. ಎಕ್ಸ್​ಪ್ರೆಸ್​ ಹೈವೆ ರಸ್ತೆಯ ಪ್ರಾಜೆಕ್ಟ್​ ಡೈರೆಕ್ಟರ್​ ಅರ್ಚನಾ ಮತ್ತು ಅಧಿಕಾರಿಗಳು ಇದ್ದರು 
ನ್ಯೂಸ್

ಬೆಂಗಳೂರು-ಚೆನ್ಬೈ ಹೆದ್ದಾರಿ ಪರಿಶೀಲನೆ

ಬಂಗಾರಪೇಟೆ: ಬೆಂಗಳೂರು-ಚೆನ್ಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಸದ ಎಂ.ಮಲ್ಲೇಶ್​ ಬಾಬು, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ ಹಾಗೂ ಇತರೆ ಅಧಿಕಾರಿಗಳು ಕಾರಿಡಾರ್​ ಪರಿಶೀಲಿಸಿದರು.

ಆಂಬುಲೆನ್ಸ್​, ಪೆಟ್ರೋಲಿಂಗ್​ ವಾಹನಗಳು, ಸಿಸಿ ಕ್ಯಾಮರಾಗಳು ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿಜಯವಾಣಿಯಲ್ಲು ಬೆಂಗಳೂರು- ಚೆನ್ಬೈ ಕಾರಿಡಾರ್​ನಲ್ಲಿ ಸಾವುಗಳ ಸರಣಿ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರ ವಲಯದಲ್ಲೂ ಚರ್ಚೆಯಾಗಿತ್ತು. ಆ ಹಿನ್ನೆಲೆಯಲ್ಲಿ ರಸ್ತೆ ಪರಿಶೀಲನೆ ನಡೆಸಿರುವ ಸಂಸದ ಎಂ.ಮಲ್ಲೇಶ್​ ಬಾಬು ಅವರು ನೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಂಸದ ಮಲ್ಲೇಶ್​ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಹಾದು ಹೋಗಿರುವ ಕಾರಿಡಾರ್​ನಲ್ಲಿ ಪ್ರತಿ 17 ಕಿಮೀಗೆ ಆಂಬುಲೆನ್ಸ್​, ಪೆಟ್ರೋಲಿಂಗ್​ ವಾಹನ ಇರೊದಾಗಿ ಹೆದ್ದಾರಿ ಯೋಜನಾ ನಿರ್ದೇಶಕಿ ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುವವರು ವೇಗ ಮಿತಿಯಲ್ಲಿ ಇರಬೇಕು, ಈ ರಸ್ತೆ ನೋಡಿದ ತಕ್ಷದ ವೇಗವಾಗಿ ಎಂತಹವರಿಗೂನು ಸಂಚರಿಸಬೇಕು ಅನಿಸುತ್ತದೆ. ಅದಕ್ಕೂ ಮುಂಚೆ ತಮ್ಮನ್ನು ನಂಬಿಕೊಂಡು ಇರೊರ ಬಗ್ಗೆ ಗಮನ ಇರಲಿ, ದ್ವಿಚಕ್ರ, ಟ್ಯಾಕ್ಟರ್​ ವಾಹನಗಳವರು ರಸ್ತೆಯಲ್ಲಿ ಓಡಾಡಬೇಡಿ, ಪೊಲೀಸು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸೂಚನೆಗಳನ್ನು ಸಾರ್ವಜನಿಕರು ಪಾಲನೆ ಮಾಡಬೇಕೆಂದು ಸಲಹೆ ನೀಡಿದರು.