ನ್ಯೂಸ್

18,769 ವಾಹನಗಳ ತಪಾಸಣೆ; 324 ಡಿಡಿ ಕೇಸ್ ಪತ್ತೆ

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಚಾಲಕ/ಸವಾರರ ವಿರುದ್ಧ ಶನಿವಾರ ರಾತ್ರಿ ಸಂಚಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 324 ಪ್ರಕರಣಗಳು ದಾಖಲಾಗಿವೆ.

ರಾತ್ರಿ ವೇಳೆ ಸಂಭವಿಸುವ ಅಪಘಾತ ಮತ್ತು ರೋಡ್ ರೇಜ್ ತಪ್ಪಿಸುವ ಸಲುವಾಗಿ 50 ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. 161 ಅಧಿಕಾರಿಗಳು, 536 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದು, 18,769 ವಾಹನಗಳನ್ನು ತಪಾಸಣೆ ನಡೆಸಿದ್ದರು.

ಈ ವೇಳೆ 324 ಚಾಲಕ ಮತ್ತು ಸವಾರರು ಮದ್ಯ ಸೇವನೆ ಮಾಡಿರುವುದು ದೃಢವಾಗಿದ್ದು, ಇವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.