ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ರೈತರ ಕೃಷಿ ಸಾಲ ಮನ್ನಾ, ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ರಾಜ್ಯದಲ್ಲಿ 217 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿ 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇದಕ್ಕೆ ಸರ್ಕಾರ ಕೊಡುವ ಭಿಕ್ಷೆ ಪರಿಹಾರ ಬೇಡ, ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಭೀಕರ ಬರಗಾಲ ಎದುರಾಗಿದ್ದರು ಸಹ ಸಾವಿರಾರೂ ಕೋಟಿ ವೆಚ್ಚ ಮಾಡಿ ಮೈಸೂರು ದಸರಾ ಆಚರಣೆಗೆ ಮುಂದಾಗಿದೆ. ಇತರೆ ಜಿಲ್ಲೆಗಳಲ್ಲೂ ದಸರಾ ಉತ್ಸವಗಳನ್ನು ನಡಸಲಾಗುತ್ತಿದೆ. ಇದಕ್ಕೆ ದೊರೆಯುವ ಅನುದಾನ ರೈತರಿಗೆ ನೆರವು ನೀಡಲು ಲಭ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರೈತರಿಗೆ ಒಂದು ಎಕರೆಗೆ ನಿಷ್ಠ 25 ಸಾವಿರ ರೂ. ಪರಿಹಾರ ೋಷಣೆ ಮಾಡಬೇಕು. ಕಬ್ಬಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರವು ಎ್ಆರ್‌ಪಿ ದರವನ್ನು ಕನಿಷ್ಠ 10.25 ಇಳುವರಿಗೆ 4,500 ರೂ.ಗೆ ಹೆಚ್ಚಿಸಬೇಕು. ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಎ್ಆರ್‌ಪಿ ಪ್ರತಿ ಟನ್‌ಗೆ 800 ರೂ. ನಿಗದಿ ಮಾಡಬೇಕು. ಅಡಿಕೆಗೆ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಸಚಿವ ಸತೀಶ್ ಜಾರಕಿಹೊಳಿ, ಅತಿ ಶೀಘ್ರದಲ್ಲೇ ಸಂಬಂಧಪಟ್ಟ ಸಚಿವರು ಮತ್ತು ಸಿಎಂ ಜತೆ ಚರ್ಚಿಸಲು ರೈತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಾಂತಕುಮಾರ್, ಒಂದು ವಾರದೊಳಗೆ ಸರ್ಕಾರ ಧಾವಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಗುರುಸಿದ್ದಪ್ಪ ಕೋಟಗಿ, ಎನ್.ಎಚ್.ದೇವಕುಮಾರ್, ಕರಿಪಸಪ್ಪಗೌಡ, ಬಲ್ಲೂರು ರವಿಕುಮಾರ್, ಕೆ.ಬೈರಾರೆಡ್ಡಿ, ಯಲ್ಲಪ್ಪ, ಆಂಜಿನಪ್ಪ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.