oplus_0 
ನ್ಯೂಸ್

ಒಳ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

Haveri - Kariyappa Aralikatti

ರಾಣೆಬೆನ್ನೂರ: ಮಾದಿಗ ಸಮುದಾಯದ ಉಪ ಜಾತಿಗಳಿಗೆ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಮಾದಿಗ ಸಂಟನೆಗಳ ಒಕ್ಕೂಟದ ವತಿಯಿಂದ ಶನಿವಾರ ನಗರದ ಮೇಡ್ಲೇರಿ ರಸ್ತೆಯ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಶಾಸಕರ ನಿವಾಸದವರೆಗೂ ತಮಟೆ ಚಳುವಳಿ ನಡೆಸಲಾಯಿತು.

ಮಾದಿಗ ಸಮಾಜ ಒಕ್ಕೂಟದ ಜಿಲ್ಲಾಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಸುಪ್ರೀಂ ಕೋರ್ಟ್​ ಆದೇಶವಿದ್ದರೂ ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರ ಆಯೋಗ ರಚನೆ ಮಾಡಿರುವುದು ಸರಿಯಲ್ಲ. ಕಳೆದ 2023ರ ಚುನಾವಣೆಯಲ್ಲಿ ಕಾಂಗ್ರೆಸ್​ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಘೋಷಿಸಿದಂತೆ ಸುಪ್ರೀಂ ಕೋಟಿರ್ನ ತೀರ್ಪು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ. ಇದಕ್ಕಾಗಿ ಮೂರು ದಶಕಗಳಿಂದ ಹೋರಾಟಗಳು ನಡೆದಿವೆ.

ಜನಸಂಖ್ಯೆಗೆ ಅನುಗುಣವಾಗಿಯೇ ವೈಜ್ಞಾನಿಕವಾದ ಒಳ ಮೀಸಲಾತಿಯ ಸೂತ್ರವನ್ನು ರೂಪಿಸಿ ಈ ಹಿಂದಿನ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶೀಫಾರಸ್ಸು ಮಾಡಿರುತ್ತದೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಬೇಕಿದೆ. ಆದರೆ, ಸರ್ಕಾರ ಆಯೋಗ ರಚನೆ ಮಾಡಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಈ ಸಮುದಾಯದ ಮತಗಳಿಂದ ಆರಿಸಿ ಬಂದ ಶಾಸಕರು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಆಧಿವೇಶನದಲ್ಲಿ ಸಮಾಜದ ಪರವಾಗಿ ದ್ವನಿ ಎತ್ತಿ ಸಮಾಜದ ಬೇಡಿಕೆಗಳನ್ನು ಜಾರಿಗೆಗೊಳಿಸಲು ಶ್ರಮಿಸಬೇಕು ಎಂದು ಒತ್ತಾಯಿಸಿದರು. ಸ್ಥಳಿಯ ಶಾಸಕರಿಗೆ ಮನವಿ ಸಲ್ಲಿಸಿದರು.

ಡಿಎಸ್​ಎಸ್​ ತಾಲೂಕು ಅಧ್ಯಕ್ಷ ಮೈಲಪ್ಪ ದಾಸಪ್ಪನವರ, ಮಲ್ಲೇಶಪ್ಪ ಮೆಣಸಿನಹಾಳ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನರ, ರಮೇಶ ಐರಣಿ, ವಿಜಯ ಮಾಳಗಿ, ಮಲ್ಲಿಕಾರ್ಜುನ ಮದಿಯಪ್ಪನವರ, ಹೊನ್ನಪ್ಪ ಯಲ್ಲಾಪುರ, ಧರ್ಮಣ್ಣ ಅಂತರವಳ್ಳಿ, ಮಂಜುನಾಥ ಗಂಗಾಪುರ, ಹನುಮಂತ ವರವಜ್ಜಿ, ಗುತ್ತೆಪ್ಪ ಹರಿಜನ, ಲಕ್ಷ$್ಮಣ ನಿಟ್ಟೂರು, ನಾಗರಾಜ ಪೂಜಾರ ಮತ್ತಿತರರು ಇದ್ದರು.