ನ್ಯೂಸ್

ಲಂಚದ ಆಸೆಗೆ ಜನಸಾಮಾನ್ಯರಿಗೆ ಅನ್ಯಾಯ

ಮೈಸೂರು: ಸರ್ಕಾರಿ ಕೆಲಸಗಳೆಂದರೆ ದೇವರ ಕೆಲಸ ಎಂಬುದು ಕೇವಲ ಗೋಡೆ ಫಲಕಗಳಿಗೆ ಸೀಮಿತವಾಗುತ್ತಿದೆ ಎಂದು ಧ್ವನಿ ಫೌಂಡೇಷನ್ ಅಧ್ಯಕ್ಷೆ ಡಾ.ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಹೊಸ ದಿಕ್ಕು ’ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರಿ ಕೆಲಸಗಳಲ್ಲಿ ಸೇವೆ ಸಲ್ಲಿಸುವ ಬಹುತೇಕ ಜನರು ಲಂಚದ ಆಸೆಗೆ ಬಲಿಯಾಗಿ ಜನಸಾಮಾನ್ಯರಿಗೆ ಅನ್ಯಾಯ ಆಗುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಕೆಲಸವೆಂದರೆ ಅದು ದೇವರ ಕೆಲಸ ಎಂಬ ಮಾತು ಇತ್ತೀಚೆಗೆ ಗೋಡೆ ಫಲಕಕ್ಕೇ ಸೀಮಿತವಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಆದರ್ಶಗಳು ಸತ್ತು ಸ್ವಾರ್ಥ ಮನೆ ಮಾಡುತ್ತಿದೆ. ಹೀಗಾಗಿ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರು ಆದರ್ಶಗಳನ್ನೂ ಮೈಗೂಡಿಸಿ ಕೆಲಸ ಮಾಡಬೇಕು ಎಂದರು.