ನ್ಯೂಸ್

ಬೆಂಗಳೂರಿನಲ್ಲಿ ಅಮಾನುಷ ಘಟನೆ: ನಡು ರಸ್ತೆಯಲ್ಲೇ ಮಹಿಳೆ ಖಾಸಗಿ ಅಂಗಾಂಗಕ್ಕೆ ಬೂಟುಗಾಲಿನಿಂದ ಒದ್ದು ಕ್ರೌರ್ಯ! | Inhumane Incident

Inhumane incident: ಸೀರೆ ಕದ್ದಿದ್ದಾಳೆಂದು ಅಂಗಡಿ ಮಾಲೀಕನೋರ್ವ ಮಹಿಳೆಯ ಖಾಸಗಿ ಅಂಗಕ್ಕೆ ಬೂಟುಗಾಲಿನಿಂದ ಒದ್ದು ಕ್ರೌರ್ಯ ಮೆರೆದಿರುವ ಅಮಾನುಷ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಗುರುವಾರ (ಸೆ.25) ನಡೆದಿದೆ.

ಮಹಿಳೆ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ ದೃಶ್ಯಗಳು ಮೊಬೈಲ್​ವೊಂದರಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿದೆ. ಇತ್ತ ಅಂಗಡಿ ಮಾಲೀಕನ ಕೆಟ್ಟ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪೊಲೀಸರ ವಿರುದ್ಧ ಆಕ್ರೋಶ

ಇನ್ನು ಹಲ್ಲೆ ನಡೆಯುತ್ತಿರುವ ಮಹಿಳೆಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ಅಂಗಡಿ ಮಾಲೀಕನ ಪರ ನಿಂತು ಆಕೆಯ ಪೂರ್ವಪರ ವಿಚಾರಿಸಿದೆ ಕೇಸ್​ ಹಾಕಿ ಜೈಲಿಗೆ ಹಾಕಿದ್ದಾರೆ. ಆದ್ರೆ ಓರ್ವ ಮಹಿಳೆ ಮೇಲೆ ಹಲ್ಲೆ ನಡೆಯುತ್ತಿರುವ ವೇಳೆ ಪೊಲೀಸರು ನೋಡುತ್ತಾ ನಿಂತಿದ್ದು, ಯಾವುದೇ ಕ್ರಮಕೈಗೊಳ್ಳದಿರುವುದು ದುರ್ದೈವ ಎಂದು ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆ ಪರವಾಗಿ ಕನ್ನಡ ಪರ ಸಂಘಟನೆಗಳು ನಿಂತಿದ್ದು, ಹಲ್ಲೆ ನಡೆಸಿದ ಬಟ್ಟೆ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿವೆ. ಮಹಿಳೆಯ ಮಾನಕ್ಕೆ ಧಕ್ಕೆ ತಂದವನನ್ನು ಬಂಧಿಸಲೇಬೇಕೆಂದು ಆಗ್ರಹಿಸಿವೆ.