ನ್ಯೂಸ್

ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ಕಾರ್ಯಾಗಾರ

ಇಂದಿರಾ ಎನ್ ಕೆ

ಕೋಟ: ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು. ಆದರೆ ಸರಿಯಾದ ಜ್ಞಾನ ಇಲ್ಲದೆ ಪ್ರಥಮ ಚಿಕಿತ್ಸೆ ವಾಡಿದಾಗ, ಆ ವ್ಯಕ್ತಿಗೆ ಉಪಕಾರಕ್ಕಿಂತ ತೊಂದರೆಯೇ ಹೆಚ್ಚು. ಹಾವು ಕಚ್ಚಿದಾಗ, ಜೇನು ನೊಣಗಳು ದಾಳಿ ವಾಡಿದಾಗ, ತಲೆತಿರುಗಿ ಬಿದ್ದಾಗ, ನಾಯಿ ಕಚ್ಚಿದಾಗ, ಫಿಟ್ಸ್ ಬಂದಾಗ ನಾವು ಏನು ವಾಡಬೇಕು ಹಾಗೂ ಏನು ವಾಡಬಾರದು ಎಂಬ ವಾಹಿತಿಯನ್ನು ದೃಶ್ಯದ ಮೂಲಕ ಬೈಂದೂರಿನ ಕೆ.ಎಚ್.ಸ್ಯಾಟಲೈಟ್ ಸೆಂಟರ್‌ನ ಕ್ಲಿನಿಕಲ್ ಮುಖ್ಯಸ್ಥ ಡಾ.ನಿಸರ್ಗ ಕಾರಂತ್ ವಾಹಿತಿ ನೀಡಿದರು.

ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆ ಆರೋಗ್ಯ ಸಂದ ವತಿಯಿಂದ ನಡೆದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಆರೋಗ್ಯ ಸಂಘದ ಸಂಚಾಲಕಿ ಮಮತಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ವೆಂಕಟೇಶ ಉಡುಪ ಸ್ವಾಗತಿಸಿದರು. ಆರೋಗ್ಯ ಸಂದ ಅಧ್ಯಕ್ಷೆ ರಕ್ಷಾ ವಂದಿಸಿದರು.