ನ್ಯೂಸ್

ಒಳನುಸುಳುವಿಕೆ ಯತ್ನ; ಗಡಿಯಲ್ಲಿ ಪಾಕ್ ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ, ಓರ್ವ ಯೋಧ ಹುತಾತ್ಮ| Soldier martyred

Soldier martyred: ಜಮ್ಮು-ಕಾಶ್ಮೀರದ ಉರಿಯ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುವಿಕೆ ಪ್ರಯತ್ನ ತಡೆಯುವ ವೇಳೆ ಭಾರತ ಮತ್ತು ಪಾಕ್ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಯೋಧ ಹುತಾತ್ಮನಾಗಿರುವ ಘಟನೆ ಬುಧವಾರ(ಆಗಸ್ಟ್ 13) ವರದಿಯಾಗಿದೆ.

ಆಗಸ್ಟ್ 12ರ ತಡರಾತ್ರಿ ಪಾಕ್ ಒಳನುಸುಳುಕೋರರು ಭಾರತದ ಗಡಿ ದಾಟಲು ಪ್ರಯತ್ನಿಸಿದ್ದಾರೆ. ಮಾಮುಲು ಒಳನುಸುಳುವಿಕೆಗಿಂದ ಇದು ಭಿನ್ನವಾಗಿದ್ದು, ಪಾಕ್​ ಸೇನೆಯೇ ತನ್ನ ಕೊಳಕು ತಂತ್ರಗಳ ಮೂಲಕ ಗಡಿದಾಟಲು ಬೆಂಬಲ ನೀಡ್ತಿದೆ ಎನ್ನಲಾಗಿದೆ.

ಭಾರತೀಯ ಸೈನಿಕರು ಒಳನುಸುಳುವಿಕೆಗೆ ತಡೆಯೊಡ್ಡಿದ್ದು, ಒಳನುಸುಳುವಿಕೆಯನ್ನು ವಿಫಲಗೊಳಿಸಿದ್ದಾರೆ. ಈ ವೇಳೆ ಎರಡು ಕಡೆಯಿಂದ ಫೈರಿಂಗ್ ನಡೆದಿದೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾನೆ. ಒಳನುಸುಳುಕೋರರು ಪರಾರಿಯಾಗಿದ್ದಾರೆ.

ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಬಳಿಕ ಮೊದಲ ಬಾರಿಗೆ ಪಾಕ್​ನಿಂದ ನಡೆದ ಪ್ರಚೋದಿತ ಗುಂಡಿನ ದಾಳಿ ಇದಾಗಿದೆ. ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ 9 ಉಗ್ರಗಾಮಿ ತಾಣಗಳನ್ನ ಗುರಿಯಾಗಿಸಿ ಏರ್​​ಸ್ಟ್ರೈಕ್ ನಡೆಸಿತ್ತು. (ಏಜೆನ್ಸೀಸ್)