ನ್ಯೂಸ್

ಸಂಪಾದಕೀಯ| ಸಾಂಕ್ರಾಮಿಕ ಕಾಯಿಲೆ ಸವಾಲು

ಕರೊನಾ ಸೋಂಕಿನ ಅಬ್ಬರ ಇಳಿಮುಖವಾಗುತ್ತಿದೆ, ಅನ್​ಲಾಕ್​ ಪ್ರಕ್ರಿಯೆಗೆ ಹಂತಹಂತವಾಗಿ ಚಾಲನೆ ಸಿಗುತ್ತಿದೆ ಎಂಬುದು ಸಮಾಧಾನಕರ. ಕೋವಿಡ್​ ಎರಡನೇ ಅಲೆಯನ್ನು ನಿಯಂತ್ರಿಸಲು ಕಠಿಣ ಲಾಕ್​ಡೌನ್​ ವಿಧಿಸುವ ಜತೆಗೆ, ಆರೋಗ್ಯ ವ್ಯವಸ್ಥೆಯು ತುಂಬ ಶ್ರಮವಹಿಸಬೇಕಾಯಿತು. ಈಗಲೂ ಸೂಕ್ತ ಎಚ್ಚರಿಕೆಯೊಂದಿಗೆ ಸಾಗಬೇಕಿದೆ. ಸುರಕ್ಷತಾ ನಿಯಮಗಳನ್ನು ರ್ನಿಲಸಿದರೆ ನಾವೇ ಅಪಾಯಕ್ಕೆ ಆಹ್ವಾನ ನೀಡಿದಂತೆ. ಕರೊನಾದ ಸವಾಲು ಇನ್ನು ಪೂರ್ತಿ ಮುಗಿದಿಲ್ಲ. ಈಗಾಗಲೇ ಮುಂಗಾರಿನ ಪ್ರವೇಶವಾಗಿದೆ. ಮಳೆ ಬಿರುಸು ಪಡೆದುಕೊಂಡಿದ್ದು, ಅದರ ಜತೆಗೇ ಸಾಂಕ್ರಾಮಿಕ ಕಾಯಿಲೆಗಳು ಅಡಿಯಿಟ್ಟಿವೆ. ಮಳೆಗಾಲದ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಸಾಮಾನ್ಯವಾದರೂ, ಪ್ರಸಕ್ತ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆ ಕರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವುದರಿಂದ ಇತರ ಕಾಯಿಲೆಗಳನ್ನು ನಿಯಂತ್ರಿಸಲೂ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದಲ್ಲಿ ಕೋವಿಡ್​ ನಿಯಮಗಳ ಪಾಲನೆ ಹಾಗೂ ಲಾಕ್​ಡೌನ್​ ನಡುವೆಯೂ ಮುಂಗಾರು ಮಳೆಗೂ ಮುನ್ನವೇ (ಮೇ 15ರವರೆಗೆ) 944 ಡೆಂ ಹಾಗೂ 391 ಚಿಕೂನ್​ ಗುನ್ಯಾ ಪ್ರಕರಣಗಳು ವರಿದಯಾಗಿವೆ. ಜೂನ್​ ಮೊದಲ ವಾರದಿಂದ ರಾಜ್ಯದಲ್ಲಿ ಮುಂಗಾರು ಕಾಲಿಟ್ಟಿದ್ದು, ಡೆಂ, ಚಿಕೂನ್​ ಗುನ್ಯಾ, ಮಲೇರಿಯಾ, ಗ್ಯಾಸ್ಟ್ರೊ ಎಂಟರಾಲಜಿಸ್ಟ್​, ಟೈಾಯಿಡ್​, ಹೆಪಟೈಟಿಸ್​ ಬಿ, ಲೆಪ್ಟೋಸ್ಪೆ$ರ್​ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಹಾಗೂ ವೈರಾಣು ಜ್ವರ ಬರುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಕಳೆದೊಂದು ವಾರದಿಂದ ಆಸ್ಪತ್ರೆಗಳಲ್ಲಿ ಶೀತಜ್ವರ, ವಾಂತಿ, ಬ್ಯಾಕ್ಟೀರಿಯಾ ಮತ್ತು ಅಮಿಬಿಯನ್​ ಆಮಶಂಕೆ, ಜಾಂಡೀಸ್​, ಟೈಾಯಿಡ್​ನಿಂದಾಗಿ ಚಿಕಿತ್ಸೆಗೆ ಆಗಮಿಸುತ್ತಿದ್ದು, ಇವರಲ್ಲಿ ಮಕ್ಕಳ ಸಂಖ್ಯೆ ಹೆಚ್ಚು. ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆಯಿಂದ ಟೈಾಯಿಡ್​, ವಾಂತಿಬೇಧಿ, ಕರುಳುಬೇನೆಯಂತಹ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ. ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ರ್ನಿಲಸದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ. ಮನೆಯ ಸುತ್ತಮುತ್ತಲೂ ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಕರೊನಾ ಕಾಲದಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಾಬೂನಿನಿಂದ ಕೈ ತೊಳೆಯುವುದು, ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇರಿಸಿಕೊಳ್ಳುವುದು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಸೇರಿ ಹಲವಾರು ಎಚ್ಚರಿಕೆ ಹೆಜ್ಜೆಗಳನ್ನು ಇರಿಸಿಕೊಂಡು ಬರಲಾಗಿದೆ. ಈ ಕ್ರಮಗಳನ್ನು ಇನ್ನು ಮುಂದೆಯೂ ಅಷ್ಟೇ ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ವೈಯಕ್ತಿಕ ಮತ್ತು ಸಾಮೂಹಿಕ ಸ್ವಚ್ಛತೆಯನ್ನು ಜೀವನಶೈಲಿಯಲ್ಲೇ ಅಳವಡಿಸಿಕೊಂಡರೆ ಬಹಳಷ್ಟು ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ತಡೆಯಬಹುದು ಅಥವಾ ಅವುಗಳ ವಿರುದ್ಧ ಹೋರಾಡಬಹುದು. ಹಾಗಾಗಿ, ಸ್ವಚ್ಛತೆ ಎಂಬುದು ಜೀವನಮೌಲ್ಯ, ಸಾಮಾಜಿಕ ಮೌಲ್ಯವಾಗಿ ಅಳವಡಿಸಿಕೊಳ್ಳಬೇಕು. ಸ್ವಸ್ಥ$್ಯ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಇಂಥ ಪ್ರಯತ್ನಗಳು ಹೆಚ್ಚು ಪರಿಣಾಮಕಾರಿ ಎನಿಸಬಲ್ಲವು. ಈ ಸಾಂಕ್ರಾಮಿಕ ಕಾಯಿಲೆಗಳ ಚಿಕಿತ್ಸೆ, ಔಷಧದ ವ್ಯವಸ್ಥೆಯಲ್ಲಿ ಲೋಪಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಜನರು ಕೂಡ ಸೂಕ್ತ ಎಚ್ಚರಿಕೆ ವಹಿಸಬೇಕು, ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.