ನವದೆಹಲಿ: ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಪಡೆ ಕೊರೆಯುವ ಚಳಿಯಲ್ಲೂ ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಎಂದು ಘೋಷಣೆ ಕೂಗಿ ದೇಶಪ್ರೇಮ ಮೆರೆದರು.
ಲಡಾಖ್ನ ಹಿಮಾಲಯ ಶ್ರೇಣಿಯಲ್ಲಿ ಸುಮಾರು 17000 ಅಡಿ ಎತ್ತರದ ಪ್ರದೇಶದಲ್ಲಿ ರಾಷ್ಟ್ರಧ್ವಜ ಹಿಡಿದು ಐಟಿಬಿಪಿ ಸಿಬ್ಬಂದಿ ಗಣರಾಜ್ಯೋತ್ಸವವನ್ನು ಸಂಭ್ರಮಿಸಿ, ಖುಷಿಪಟ್ಟರು.
ಲಡಾಖ್ನಲ್ಲಿ ಸದ್ಯ ಮೈನಸ್ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಕೊರೆಯುವ ಚಳಿಯಲ್ಲೂ ಹಿಮಯೋಧರು "ಭಾರತ್ ಮಾತಾ ಕೀ ಜೈ" ಮತ್ತು "ವಂದೇ ಮಾತರಂ" ಎಂದು ಉದ್ಘೋಷಗಳನ್ನು ಕೂಗಿ ರಾಷ್ಟ್ರಭಕ್ತಿಯನ್ನು ಮೆರೆದರು.
ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯೋಧರ ದಿಟ್ಟತನಕ್ಕೆ ಹಾಗೂ ರಾಷ್ಟ್ರಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿ, ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ. (ಏಜೆನ್ಸೀಸ್)