ನ್ಯೂಸ್

IndiGo Flight: ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದ ಕೊಚ್ಚಿಗೆ ವಾಪಸ್​!

IndiGo Flight: ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಶನಿವಾರ ಬೆಳಿಗ್ಗೆ ತಾಂತ್ರಿಕ ದೋಷದಿಂದಾಗಿ ಕೊಚ್ಚಿಗೆ ಹಿಂತಿರುಗಬೇಕಾಯಿತು ಎಂದು ವಿಮಾನಯಾನ ಸಂಸ್ಥೆಯ ನಿಕಟ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಂತ್ರಿಕ ದೋಷ ಪತ್ತೆಯಾಗುವ ಮೊದಲು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ್ದ ವಿಮಾನವು ಆರು ಸಿಬ್ಬಂದಿ ಸೇರಿದಂತೆ 180 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.

6E-1403 (COK-AUH) ವಿಮಾನವು ಶುಕ್ರವಾರ ರಾತ್ರಿ 11.10 ಕ್ಕೆ ಕೊಚ್ಚಿಯಿಂದ ಹೊರಟು, ತಾಂತ್ರಿಕ ದೋಷದಿಂದಾಗಿ ಶನಿವಾರ ಬೆಳಗಿನ ಜಾವ 1.44 ರ ಸುಮಾರಿಗೆ ನಗರಕ್ಕೆ ಮರಳಿತು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಈ ಕುರಿತು ಇಂಡಿಗೋ ವಿಮಾನ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)