ನ್ಯೂಸ್

ವಿಕ್ರಾಂತ್ ನೌಕೆ ಸೇನೆಗೆ ಹಸ್ತಾಂತರ: ಸ್ವದೇಶಿ ನಿರ್ವಿುತ ಯುದ್ಧವಿಮಾನ ವಾಹಕ ನೌಕಾಪಡೆಗೆ ಸೇರ್ಪಡೆ

ನವದೆಹಲಿ: ದೇಶೀಯವಾಗಿ ನಿರ್ವಿುಸಲಾದ ಮೊದಲ ಯುದ್ಧವಿಮಾನ ವಾಹಕ ನೌಕೆ ‘ವಿಕ್ರಾಂತ್’ ಗುರುವಾರ ಭಾರತೀಯ ನೌಕಾ ಪಡೆಗೆ ಹಸ್ತಾಂತರಗೊಂಡಿತು. ಕೊಚ್ಚಿ ಶಿಪ್​ಯಾರ್ಡ್ ಸಂಸ್ಥೆ ನಿರ್ವಿುಸಿರುವ ಸಮರ ನೌಕೆ ಆಗಸ್ಟ್ 15ರಂದು ನೇವಿಗೆ ಸೇರ್ಪಡೆಯಾಗಲಿದೆ. 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿರುವ ವಿಕ್ರಾಂತ್ ನೌಕೆ, ಮೂರು ವಾರಗಳ ಹಿಂದೆ ಸಾಗರದಲ್ಲಿ ನಾಲ್ಕು ಹಾಗೂ ಅಂತಿಮ ಸುತ್ತಿನ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.

ನೌಕಾ ಪಡೆಗೆ ವಿಕ್ರಾಂತ್ ಹಸ್ತಾಂತರ ವಾಗುವುದರೊಂದಿಗೆ, ವಿಮಾನ ವಾಹಕ ಸಮರ ನೌಕೆಯನ್ನು ದೇಶೀಯವಾಗಿ ಕಟ್ಟುವ ಸಾಮರ್ಥ್ಯ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಿದೆ. ನೌಕೆ ಹಸ್ತಾಂತರವಾಗಿರುವುದು ಒಂದು ‘ಐತಿಹಾಸಿಕ’ ಘಟನೆ ಎಂದು ನೌಕಾಪಡೆ ವರ್ಣಿಇಸಿದೆ. ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಸೇರ್ಪಡೆ ಯಾಗುತ್ತಿರುವುದು ಮಹತ್ವದ ವಿಚಾರವಾಗಿದೆ ಎಂದಿದೆ.

  • ಸಾಮರ್ಥ್ಯ ಎಷ್ಟು?
  • ಮಿಗ್-19 ಫೈಟರ್ ಜೆಟ್, ಕಮೋವ್-31 ಹೆಲಿಕಾಪ್ಟರ್ ಮತ್ತು ಎಂಎಚ್-60ಆರ್ ಮಲ್ಟಿ- ರೋಲ್ ಹೆಲಿಕಾಪ್ಟರ್​ಗಳನ್ನು ಕಾರ್ಯಾಚರಿಸುವ ಸಾಮರ್ಥ್ಯ ‘ವಿಕ್ರಾಂತ್’ಗಿದೆ.
  • 2,300 ಕಂಪಾರ್ಟ್​ವೆುಂಟ್: ಸುಮಾರು 1,700 ಸಿಬ್ಬಂದಿ ವಸತಿಗೆ ಅನುಕೂಲವಾಗಲು 2,300ಕ್ಕೂ ಹೆಚ್ಚು ಕಂಪಾರ್ಟ್​ವೆುಂಟ್​ಗಳನ್ನು ಈ ನೌಕೆ ಹೊಂದಿದೆ. ಮಹಿಳಾ ಅಧಿಕಾರಿಗಳ ವಸತಿಯ ವಿಶೇಷ ಕ್ಯಾಬಿನ್​ಗಳೂ ಅದರಲ್ಲಿ ಒಳಗೊಂಡಿವೆ.
  • ಗಂಟೆಗೆ ಗರಿಷ್ಠ 28 ನಾಟ್ಸ್ ವೇಗದಲ್ಲಿ ಚಲಿಸಬಲ್ಲದು.
  • ಸುಮಾರು 7,500 ನಾಟಿಕಲ್ ಮೈಲು ಸಂಚರಿಸುವ ಸಾಮರ್ಥ್ಯ.
  • ನೌಕೆ 262 ಮೀಟರ್ ಉದ್ದ, 62 ಮೀಟರ್ ಅಗಲ ಹಾಗೂ 59 ಮೀ. ಎತ್ತರವಿದೆ. 2009ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿತ್ತು.