ನ್ಯೂಸ್

ಏಪ್ರಿಲ್‌ನಲ್ಲಿ ಭಾರತದ ಸರಕು ರಫ್ತು ಸ್ವಲ್ಪಮಟ್ಟಿಗೆ ಹೆಚ್ಚಳ; ಆಮದು ಕೂಡ ಏರಿಕೆ

ನವದೆಹಲಿ: ಏಪ್ರಿಲ್ 2024ರ ಏಪ್ರಿಲ್​ನಲ್ಲಿ ಭಾರತದ ಸರಕು ರಫ್ತುಗಳು 34.99 ಶತಕೋಟಿ ಡಾಲರ್​ಗೆ (2,92,189 ಕೋಟಿ ರೂಪಾಯಿ) ಏರಿಕೆಯಾಗಿದೆ.

ಹಿಂದಿನ ವರ್ಷದ ಏಪ್ರಿಲ್​ ತಿಂಗಳಿನಲ್ಲಿ ಈ ಮೊತ್ತ 34.62 ಶತಕೋಟಿ ಡಾಲರ್​ ಇತ್ತು ಎಂದು ಬುಧವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ.

ಆಮದು ಕೂಡ 2024ರ ಏಪ್ರಿಲ್​ನಲ್ಲಿ 54.09 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. 2023ರ ಏಪ್ರಿಲ್​ ತಿಂಗಳಲ್ಲಿ ಈ ಮೊತ್ತ 49.06 ಶತಕೋಟಿ ಡಾಲರ್ ಇತ್ತು.

ವ್ಯಾಪಾರ ಕೊರತೆ ಅಂದರೆ, ಆಮದು ಮತ್ತು ರಫ್ತಿನ ನಡುವಿನ ಅಂತರವು ಈ ತಿಂಗಳಲ್ಲಿ 19.1 ಶತಕೋಟಿ ಡಾಲರ್​ ಇತ್ತು.

ಮಾಧ್ಯಮಗಳ ಜತೆ ಈ ಅಂಕಿ-ಅಂಶಗಳನ್ನು ಹಂಚಿಕೊಂಡ ವಾಣಿಜ್ಯ ಕಾರ್ಯದರ್ಶಿ ಸುನೀಲ್ ಬರ್ತ್ವಾಲ್ ಅವರು, ಹೊಸ ಆರ್ಥಿಕ ವರ್ಷವು ಉತ್ತಮ ರೀತಿಯಲ್ಲಿ ಪ್ರಾರಂಭವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇದು ಮುಂದುವರಿಯುತ್ತದೆ ಎಂದು ಆಶಿಸಿದರು.