ನವದೆಹಲಿ: ದೇಶದಲ್ಲಿ ಕರೊನಾ ಹಾವಳಿ ಅಧಿಕವಿದ್ದರೂ ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯಿಂದಾಗಿ ಕರೊನಾ ಸೋಂಕಿತರ ಸಾವು ಕನಿಷ್ಠ ಪ್ರಮಾಣದಲ್ಲಿ ಹಾಗೂ ಚೇತರಿಕೆ ಅತ್ಯಧಿಕ ಪ್ರಮಾಣದಲ್ಲಿ ನಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ 65ನೇ ಸಂಸ್ಥಾಪಕರ ದಿನದಲ್ಲಿ ಭಾಗವಹಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ವಿಷಯ ತಿಳಿಸಿದರು.
ದೇಶದಲ್ಲಿ ಸೋಂಕಿತರ ಪ್ರಮಾಣ 50 ಲಕ್ಷ ದಾಟಿದ್ದರೂ ಚಿಕಿತ್ಸೆ ಹಾಗೂ ನಿರ್ವಹಣೆ ವಿಷಯದಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ದೇಶಾದ್ಯಂತ 1800 ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಟೆಸ್ಟಿಂಗ್ ಕೆಪಾಸಿಟಿ ಈಗ 15 ಲಕ್ಷ ತಲುಪಿದೆ. ಕೋವಿಡ್ ನಿಯಂತ್ರಣದಲ್ಲಿ ಭಾರತ ಸದ್ಯದಲ್ಲೇ ಗಣನೀಯ ಯಶಸ್ಸು ಸಾಧಿಸಲಿದೆ ಎಂದಿರುವ ಅವರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್)