ನ್ಯೂಸ್

ಕೊವ್ಯಾಕ್ಸಿನ್ ಪ್ರಯೋಗ ಶುರು

ಭಾರತದ ಮೊದಲ ಕೋವಿಡ್-19 ಲಸಿಕೆಯ ಮಾನವ ಪ್ರಯೋಗಕ್ಕೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್್ಸ) ಆಸ್ಪತ್ರೆಯಲ್ಲಿ ಚಾಲನೆ ಸಿಕ್ಕಿದೆ.

ಐಸಿಎಂಆರ್ ನೇತೃತ್ವದಲ್ಲಿ ದೆಹಲಿಯ 30 ವರ್ಷದ ಯುವಕನಿಗೆ ಲಸಿಕೆ ನೀಡಲಾಗಿದೆ. ಈ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಸಂಶೋಧಿಸಿದೆ.