ನ್ಯೂಸ್

1.5 ಲಕ್ಷ ಕೋಟಿ ರೂ.ಗೇರಿದ ಭಾರತದ ರಕ್ಷಣಾ ಉತ್ಪಾದನೆ

ನವದೆಹಲಿ: ದೇಶದ ವಾರ್ಷಿಕ ರಕ್ಷಣಾ ಉತ್ಪಾದನೆ 2024-25ನೇ ಹಣಕಾಸು ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠ 1,50,590 ಕೋಟಿ ರೂಪಾಯಿಗೆ ಏರಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ. ಇದು ಕಳೆದ ಐದು ವರ್ಷಗಳಲ್ಲಿ ದಾಖಲಾದ ಶೇಕಡ 90ರಷ್ಟು ಜಿಗಿತವಾಗಿದೆ. ಆತ್ಮನಿರ್ಭರ ಭಾರತ ಉಪಕ್ರಮದಡಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ದೇಶದ ಗುರಿಯಲ್ಲಿ ಭಾರಿ ಮುನ್ನಡೆಯಾಗಿರುವದನ್ನು ಇದು ಸೂಚಿಸುತ್ತದೆಂದು ಸಿಂಗ್ ವಿವರಿಸಿದ್ದಾರೆ. ಹಿಂದಿನ ಸಾಲಿನ ರಕ್ಷಣಾ ಉತ್ಪಾದನೆಯ ಮೊತ್ತ 1.27 ಲಕ್ಷ ಕೋಟಿ ರೂಪಾಯಿಯಾಗಿದ್ದು ಈ ಸಾಲಿನಲ್ಲಿ ಶೇ. 18ರಷ್ಟು ಭಾರಿ ಜಿಗಿತವಾಗಿದೆ. ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್​ಯುು) ಹಾಗೂ ಇತರ ಪಿಎಸ್​ಯುುಗಳ ಕೊಡುಗೆ ಶೇ. 77ರಷ್ಟಿದೆ.