ನ್ಯೂಸ್

ಭಾರತೀಯರ ಠೇವಣಿ ಪ್ರಮಾಣ ಏರಿಕೆ ಹಿನ್ನೆಲೆ ಸ್ವಿಸ್​ ಬ್ಯಾಂಕ್​ ಠೇವಣಿ ವಿವರ ಕೇಳಿದ ಸರ್ಕಾರ

ನವದೆಹಲಿ: ಸ್ವಿಸ್​ ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ 13 ವರ್ಷಗಳಲ್ಲೇ ಗರಿಷ್ಠ ಏರಿಕೆ ದಾಖಲಿಸಿದೆ ಎಂಬ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸ್ವಿರ್ಜಲೆಂಡ್​ ಸರ್ಕಾರದಿಂದ ಭಾರತ ಅಧಿಕೃತ ಮಾಹಿತಿ ಕೋರಿದೆ. ಸ್ವಿಸ್​ ಬ್ಯಾಂಕ್​ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವಾಲಯ, 2019ರಿಂದ ಸ್ವಿಸ್​ ಬ್ಯಾಂಕುಗಳಲ್ಲಿ ಭಾರತೀಯ ಗ್ರಾಹಕರ ಠೇವಣಿ ಇಳಿಮುಖವಾಗಿದೆ. ಆದರೆ, 2020ರ ವಾಸ್ತವಾಂಶ ಇತ್ತೀಚಿನ ಡೇಟಾ ಕುರಿತು ವಿವರ ನೀಡುವಂತೆ ಸ್ವಿಸ್​ ಅಧಿಕಾರಿಗಳನ್ನು ಕೋರಲಾಗಿದೆ. ಸ್ವಿರ್ಜಲೆಂಡ್​ನಲ್ಲಿ ಭಾರತೀಯರು ಇರಿಸಿದ್ದಾರೆ ಎನ್ನಲಾದ ಬೃಹತ್​ ಮೊತ್ತದ ಕಾಳಧನವನ್ನು ವರದಿಗಳಲ್ಲಿರುವ ಅಂಕಿ ಅಂಶ ಬಿಂಬಿಸುತ್ತಿಲ್ಲ. ಈ ಪ್ರಕಟವಾಗಿರುವ ದತ್ತಾಂಶಗಳಲ್ಲಿ ಭಾರತೀಯರು, ಅನಿವಾಸಿ ಭಾರತೀಯರು, ಇತರರು ತೃತೀಯ ರಾಷ್ಟ್ರದ ಸಂಸ್ಥೆಗಳ ಹೆಸರಿನಲ್ಲಿ ಸ್ವಿಸ್​ ಬ್ಯಾಂಕ್​ನಲ್ಲಿ ಇರಿಸಿರುವ ಠೇವಣಿಯ ಲೆಕ್ಕ ಇಲ್ಲ ಎಂದು ಹೇಳಿದೆ.

ಸ್ವಿಸ್​ ಬ್ಯಾಂಕ್​ ನೀಡಿದ ಡೇಟಾ
ಸ್ವಿಸ್​ ನ್ಯಾಷನಲ್​ ಬ್ಯಾಂಕ್​ (ಎಸ್​ಎನ್​ಬಿ) ಡೇಟಾ ಪ್ರಕಾರ, ಸ್ವಿಸ್​ ಬ್ಯಾಂಕುಗಳಲ್ಲಿ 2019ರ ಕೊನೆಗೆ ಭಾರತೀಯ ಗ್ರಾಹಕರ ಸರಾಸರಿ ಠೇವಣಿ 899 ದಶಲಕ್ಷ ಸ್ವಿಸ್​ ್ರಾಂಕ್ಸ್​ (6,625 ಕೋಟಿ ರೂ.) ಮತ್ತು ಎರಡು ವರ್ಷದ ಕುಸಿತದ ಬಳಿಕ 2020ರಲ್ಲಿ ಏರಿಕೆಯಾಗಿದ್ದು, ಈ ವರ್ಷದ ಕೊನೆಗೆ 2,554.7 ದಶಲಕ್ಷ ಸಿಎಚ್​ಎ್​ (20,706 ಕೋಟಿ ರೂಪಾಯಿ) ಆಗಿದೆ. ಇದರಲ್ಲಿ 503.9 ದಶಲಕ್ಷ ಸಿಎಚ್​ಎ್​ (4,000 ಕೋಟಿ ರೂಪಾಯಿಗೂ ಅಧಿಕ) ಗ್ರಾಹಕ ಠೇವಣಿಯಲ್ಲಿ, 383 ದಶಲಕ್ಷ ಸಿಎಚ್​ಎ್​ (3,100 ಕೋಟಿ ರೂ.ಗೂ ಅಧಿಕ) ಇತರೆ ಬ್ಯಾಂಕುಗಳ ಮೂಲಕ, 20 ಲಕ್ಷ ಸಿಎಚ್​ಎ್​ (16.5 ಕೋಟಿ ರೂ.) ಟ್ರಸ್ಟ್​ ಗಳ ಮೂಲಕ ಮತ್ತು ಗರಿಷ್ಠ ಪಾಲು 1,664.8 ದಶಲಕ್ಷ ಸಿಎಚ್​ಎ್​ (ಅಂದಾಜು 13,500 ಕೋಟಿ ರೂ.) ಬಾಂಡ್ಸ್​, ಸೆಕ್ಯುರಿಟೀಸ್​ ಮತ್ತು ಇತರೆ ವಿವಿಧ ಹಣಕಾಸು ಉತ್ಪನ್ನಗಳ ರೂಪದಲ್ಲಿ ಹೂಡಿಕೆಯಾಗಿವೆ.

ಸ್ವಿಸ್​ ಬ್ಯಾಂಕುಗಳ 2020ರ ಠೇವಣಿ ಲೆಕ್ಕಾಚಾರ
್ಝಗ್ರಾಹಕ ಠೇವಣಿ ಒಟ್ಟು ಮೌಲ್ಯ 2 ಲಕ್ಷ ಕೋಟಿ ಸಿಎಚ್​ಎ್​ ್ಝವಿದೇಶಿ ಗ್ರಾಹಕರ ಠೇವಣಿ 600 ಶತಕೋಟಿ ಸಿಎಚ್​ಎ್​ಗೂ ಅಧಿಕ ್ಝಬ್ರಿಟನ್​ ಗ್ರಾಹಕರೇ ಹೆಚ್ಚಾಗಿದ್ದು, ಅವರ ಠೇವಣಿ 377 ಶತಕೋಟಿ ಸಿಎಚ್​ಎ್​ ್ಝಅಮೆರಿಕದ ಗ್ರಾಹಕರು ಎರಡನೇ ಸ್ಥಾನದಲ್ಲಿದ್ದು ಅವರ ಠೇವಣಿ 152 ಶತಕೋಟಿ ಸಿಎಚ್​ಎ್​ ್ಝಭಾರತೀಯ ಗ್ರಾಹಕರು 51ನೇ ಸ್ಥಾನದಲ್ಲಿದ್ದು, ಠೇವಣಿ ಮೌಲ್ಯ 2,554.7 ದಶಲಕ್ಷ ಸಿಎಚ್​ಎ್​ ್ಝಪಾಕಿಸ್ತಾನ ಗ್ರಾಹಕರ ಠೇವಣಿ ಪ್ರಮಾಣ 642 ದಶಲಕ್ಷ ಸಿಎಚ್​ಎ್​

ಇಳಿಕೆಯಾಗಿದ್ದ ಠೇವಣಿ
ಸ್ವಿಸ್​ ಬ್ಯಾಂಕುಗಳಲ್ಲಿ 2019ರ ಕೊನೆಗೆ ವಾಸ್ತವದಲ್ಲಿ ಗ್ರಾಹಕ ಖಾತೆ ಠೇವಣಿ ಕುಸಿದು, 550 ದಶಲಕ್ಷ ಸಿಎಚ್​ಎ್​ ತಲುಪಿತ್ತು. ಟ್ರಸ್ಟ್​ಗಳ ಮತ್ತು ಇತರೆ ಸಂಸ್ಥೆಗಳ ಮೂಲಕ ಬಾಂಡ್ಸ್​, ಸೆಕ್ಯುರಿಟೀಸ್​ಗಳಲ್ಲಿ ಹೂಡಿಕೆಯಾದ ಮೊತ್ತ 74 ಲಕ್ಷ ಸಿಎಚ್​ಎ್​ ನಿಂದ ಶೇಕಡ 50 ಕುಸಿದಿತ್ತು. ಇದೇ ವೇಳೆ, ಇತರೆ ಬ್ಯಾಂಕುಗಳ ಮೂಲಕ ಹೊಂದಿದ್ದ ಹಣದ ಪ್ರಮಾಣ 88 ದಶಲಕ್ಷ ಸಿಎಚ್​ಎ್​ಗೆ ಏರಿಕೆಯಾಗಿತ್ತು.

2019ರಿಂದ ವಾರ್ಷಿಕ ಮಾಹಿತಿ ವಿನಿಮಯ
ಭಾರತ ಮತ್ತು ಸ್ವಿರ್ಜಲೆಂಡ್​ ನಡುವೆ ತೆರಿಗೆ ಸಂಬಂಧಿತ ಮಾಹಿತಿ ವಿನಿಮಯದ ಒಪ್ಪಂದ ಏರ್ಪಟ್ಟಿದೆ. ಇದರಂತೆ, 2018ರಿಂದೀಚೆಗೆ ಸ್ವಿಸ್​ ಹಣಕಾಸು ಸಂಸ್ಥೆಗಳು ಪ್ರತಿ ವರ್ಷ ಭಾರತೀಯರ ಠೇವಣಿ ಕುರಿತ ಮಾಹಿತಿಯನ್ನು ಭಾರತ ಸರ್ಕಾರದ ಜತೆ ಹಂಚಿಕೊಳ್ಳುತ್ತಿವೆ. ಮೊದಲ ಸಲ ಮಾಹಿತಿಯನ್ನು 2019ರ ಸೆಪ್ಟೆಂಬರ್​ನಲ್ಲಿ ಹಂಚಿಕೊಂಡಿವೆ. 2020ರಲ್ಲೂ ಸೆಪ್ಟೆಂಬರ್​ ತಿಂಗಳಲ್ಲಿ ಇಂಥದ್ದೇ ಮಾಹಿತಿಯನ್ನು ಹಂಚಿಕೊಂಡಿವೆ.