ನ್ಯೂಸ್

ಭಾರತೀಯರು ವೀಸಾ ಇಲ್ಲದೆ ಈ 7 ಅದ್ಭುತ ಸ್ಥಳಗಳಿಗೆ ಭೇಟಿ ನೀಡಬಹುದು! ನೀವೂ ಒಮ್ಮೆ ಟ್ರೈ ಮಾಡಿ... Travel Guide

Travel Guide : ಸುತ್ತಾಡುವುದು, ಹೊಸ ಹೊಸ ಜಾಗಗಳನ್ನು ನೋಡುವುದು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ರಜಾ ದಿನಗಳಲ್ಲಿ ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಸೇರಿ ಟ್ರಿಪ್​ ಹೋಗಲು ಹೆಚ್ಚಿನ ಜನರು ಕಾಯುತ್ತಿರುತ್ತಾರೆ. ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು ಪ್ರವಾಸ ಮಾಡಲೇಬೇಕು ಎನ್ನುವ ಜನರು ಸಾಕಷ್ಟಿದ್ದಾರೆ. ಹಾಗಾದರೆ ಭಾರತೀಯರಿಗೆ ಟ್ರಿಪ್​​ ಹೋಗಲು ಯಾವೆಲ್ಲ ಜಾಗ ಸೂಕ್ತ ಹಾಗೂ ವೀಸಾ ಇಲ್ಲದೆ ಪ್ರವಾಸ ಮಾಡಬಹುದಾದ ಜಾಗ ಯಾವುದು ಎಂಬ ಡೀಟೆಲ್ಸ್​ ಇಲ್ಲಿದೆ.

ಭಾರತೀಯ ಪ್ರವಾಸಿಗರಿಗೆ 7 ವೀಸಾ-ಮುಕ್ತ ಬೇಸಿಗೆ ತಾಣಗಳು:

ಮಾಲ್ಡೀವ್ಸ್

ಮಾಲ್ಡೀವ್ಸ್​​ ಕೇವಲ ನವಜೋಡಿಗಳಿಗೆ ಮಾತ್ರವಲ್ಲ. ಎಲ್ಲರನ್ನೂ ಕೈಬೀಸಿ ಕರೆಯುವ ನೀಲಿ ಆಕಾಶ ಮತ್ತು ನೀಲಿ ನೀರಿನಿಂದ ಕಂಗೊಳಿಸುವ ಜಾಗ. ಆಗಮನದ ನಂತರ 30 ದಿನಗಳ ವೀಸಾದ ಜೊತೆ ನಿಮಗೆ ಸಿಗುವುದು ಪಾಸ್‌ಪೋರ್ಟ್ ಹಾಗೂ ವಿಶ್ರಾಂತಿಗೆ ಐಷಾರಾಮಿ ಸ್ಥಳಗಳು. ಇಲ್ಲಿನ ಖಾಸಗಿ ವಿಲ್ಲಾಗಳು, ತೇಲುವ ಹೋಟೆಲ್​ಗಳು, ಸಂಜೆಯ ಸೂರ್ಯಾಸ್ತ. ಇಂತಹ ಜಾಗ ರಜಾ ದಿನಗಳಲ್ಲಿ ಸುತ್ತಾಡಲು ಹೇಳಿಮಾಡಿಸಿದಂತಿದೆ.

ವೀಸಾ ಪ್ರಕಾರ: ಆಗಮನದ ನಂತರ ವೀಸಾ (30 ದಿನ)

ಥೈಲ್ಯಾಂಡ್

ಬೇಸಿಗೆಯಲ್ಲಿ ಭೇಟಿ ನೀಡಲು ಥೈಲ್ಯಾಂಡ್ ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಇಲ್ಲಿನ ಪಾರ್ಟಿ ವೈಬ್‌ ಕೂಡ ಬಜೆಟ್‌ ಫ್ರೆಂಡ್ಲಿಯಾಗಿದೆ. ಭಾರತೀಯರು ಇಲ್ಲಿ ಪ್ರಸ್ತುತ 30 ದಿನಗಳ ವೀಸಾ-ಮುಕ್ತತೆಯನ್ನು ಪಡೆಯುತ್ತಾರೆ. ಇಲ್ಲಿನ ತಂಪಾದ ಮೋಡ ವಾತಾವರಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ವೀಸಾ ಪ್ರಕಾರ: ವೀಸಾ ಮುಕ್ತ (30 ದಿನಗಳವರೆಗೆ — ಭಾರತೀಯರಿಗೆ ಸೀಮಿತ ಅವಧಿಯ ವಿನಾಯಿತಿ)

ಶ್ರೀಲಂಕಾ

ದಕ್ಷಿಣ ಭಾರತದಿಂದ ಕೇವಲ ಒಂದು ಸಣ್ಣ ವಿಮಾನದಲ್ಲಿ ಶ್ರೀಲಂಕಾಗೆ ಹೋಗಬಹುದಾಗಿದೆ. ಶ್ರೀಲಂಕಾವು ಒಂದು ಸಣ್ಣ ಜಾಗದಲ್ಲಿ - ಕಡಲತೀರ, ಚಹಾ ತೋಟ, ವನ್ಯಜೀವಿ ಸಫಾರಿ ಮತ್ತು ಪ್ರಾಚೀನ ಅವಶೇಷಗಳಿಂದ ತುಂಬಿಕೊಂಡ ಪ್ರವಾಸಿ ತಾಣವಾಗಿದೆ. ಇಲ್ಲಿ ಭಾರತೀಯರು ಬಂದ ನಂತರ ವೀಸಾ ಪಡೆಯಬಹುದು ಅಥವಾ ETA ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು, ಇವೆರಡೂ ತುಂಬಾ ಸರಳವಾಗಿವೆ.

ವೀಸಾ ಪ್ರಕಾರ: ಎಲೆಕ್ಟ್ರಾನಿಕ್ ಪ್ರಯಾಣ (ETA) ಅಥವಾ ಆಗಮನದ ನಂತರ ವೀಸಾ

ಮಾರಿಷಸ್

ಮಾರಿಷಸ್‌ ಒಂದು ಸುಂದರವಾದ ದೇಶ. ಅಂತರಾಷ್ಟ್ರೀಯ ಪ್ರವಾಸಗಳಿಗೆ ಈ ದೇಶವು ತುಂಬಾ ಉತ್ತಮ. ಮಾರಿಷಸ್‌ ತನ್ನ ಸುಂದರವಾದ ಕಡಲತೀರಗಳು, ಎತ್ತರದ ಪರ್ವತಗಳು, ದಟ್ಟವಾದ ಕಾಡುಗಳು, ನದಿಗಳು, ಜಲಪಾತಗಳನ್ನು ಹೊಂದಿರುವ ಅದ್ಭುತ ದೇಶವಾಗಿದೆ. ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ, ಬಹುಶಃ ನೀವು ಮಾರಿಷಸ್ ಆಯ್ಕೆಯನ್ನು ಮಾಡಬಹುದು. ಭಾರತೀಯರು ವೀಸಾ ಇಲ್ಲದೆ 60 ದಿನಗಳವರೆಗೆ ಇಲ್ಲಿ ಇರಬಹುದಾಗದೆ.

ವೀಸಾ ಪ್ರಕಾರ: ವೀಸಾ ಮುಕ್ತ (60 ದಿನಗಳವರೆಗೆ)

ಭೂತಾನ್

ಭೂತಾನ್ ಭಾರತೀಯ ಪ್ರವಾಸಿಗರಿಗೆ ವೀಸಾ ಇಲ್ಲದೆ ಭೇಟಿ ನೀಡಲು ಅವಕಾಶ ನೀಡುತ್ತದೆ. ಆದರೂ ಇಲ್ಲಿ ಬರಲು ನಿಮಗೆ ಪರವಾನಗಿ ಬೇಕಾಗುತ್ತದೆ. ಬೇಸಿಗೆಯಲ್ಲಿ ಹಚ್ಚ ಹಸಿರಿನ ಕಣಿವೆಗಳು ಮತ್ತು ಮಂಜಿನಿಂದ ಕೂಡಿರುವ ಮಠಗಳಿಗೆ ಭೇಟಿ ನೀಡಲು ಭೂತಾನ್​ ಸೂಕ್ತವಾಗಿದೆ. ಆದರೆ ನಿಮ್ಮ ಪರವಾನಗಿಯನ್ನು ಮುಂಚಿತವಾಗಿ ನೋಂದಾಯಿಸಲು ಮರೆಯಬೇಡಿ.

ವೀಸಾ ಪ್ರಕಾರ: ಭಾರತೀಯರಿಗೆ ವೀಸಾ-ಮುಕ್ತ (ಪ್ರವೇಶ ಪರವಾನಗಿ ಅಗತ್ಯವಿದೆ)

ಇಂಡೋನೇಷ್ಯಾ

ಇಂಡೋನೇಷ್ಯಾ ಇದು ದ್ವೀಪಗಳ ದೇಶ. ಕೊಮೊಡೊ ದ್ವೀಪ, ಗಿಲಿ ದ್ವೀಪಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಭಾರತೀಯರು ಪ್ರವಾಸಕ್ಕಾಗಿ 30 ದಿನಗಳವರೆಗೆ ವೀಸಾ-ಮುಕ್ತವಾಗಿ ಇಲ್ಲಿ ಇರಬಹುದಾಗಿದೆ. ಇದು ನಿಮಗೆ ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವಾಗಿದೆ.

ವೀಸಾ ಪ್ರಕಾರ: ವೀಸಾ-ಮುಕ್ತ (30 ದಿನಗಳವರೆಗೆ)

ಸೀಶೆಲ್ಸ್

ಭಾರತೀಯರು ಸರತಿ ಸಾಲಿನಲ್ಲಿ ನಿಂತು ವೀಸಾ ಪಡೆದು ಹೋಗಬಹುದಾದ ದ್ವೀಪ ಸೀಶೆಲ್ಸ್. ಸೀಶೆಲ್ಸ್​ಗೆ ಬಂದ ನಂತರ ಉಚಿತ ಪರವಾನಗಿಯನ್ನು ನೀಡುತ್ತದೆ. ಇಲ್ಲಿನ ಬಿಳಿ ಮರಳಿನ ಕಡಲತೀರಗಳು, ಹವಳದ ದಿಬ್ಬಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

ವೀಸಾ ಪ್ರಕಾರ: ವೀಸಾ-ಮುಕ್ತ (ಆಗಮನದ ನಂತರ ಪರವಾನಗಿ)

ಹಾಗಾದರೆ ಈ ಏಳು ಅದ್ಭುತ ತಾಣಗಳಲ್ಲಿ ನಿಮಗಿಷ್ಟವಾದ ಸ್ಥಳಕ್ಕೆ ನಿಮ್ಮ ಫ್ಯಾಮಿಲಿ ಅಥವಾ ಫ್ರೆಂಡ್ಸ್​​ ಜೊತೆ ಭೇಟಿ ನೀಡಿ. ಬೇಸಿಗೆಯ ರಜಾದಿನಗಳನ್ನು ಆನಂದಿಸಿ.