ನ್ಯೂಸ್

ಇಡೀ ಜಗತ್ತಿನಲ್ಲಿ 9 ಜನ ಭಾರತೀಯ ಮೂಲದವರು ವಿವಿಧ ದೇಶಗಳ ಮುಖ್ಯಸ್ಥರು..!

Webdesk - Athul Damale

ಬೆಂಗಳೂರು: ಎಲ್ಲರಿಗೂ ತಿಳಿದಿರುವಂತೆ ರಿಷಿ ಸುನಕ್​ ಯುಕೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ. ಇವರು ಭಾರತ ಹಾಗೂ ಆಫ್ರಿಕಾ ಹಿನ್ನೆಲೆ ಉಳ್ಳವರು. ಇದೀಗ ಯುರೋಪ್​ನಲ್ಲಿ ಒಟ್ಟು ಮೂವರು ಪ್ರಧಾನಿಗಳು, ಭಾರತೀಯ ಮೂಲದವರು! ಬ್ರಿಟನ್​ ಬಿಟ್ಟು ಉಳಿದ ಎರಡು ದೇಶಗಳು ಯಾವುವು ಅಂತ ಕೇಳ್ತೀರಾ| ಉತ್ತರ ಹೀಗಿದೆ...

ಪೋರ್ಚುಗಲ್​ ದೇಶದಲ್ಲಿ ಅಂತೋನಿಯೋ ಕೋಸ್ತಾ ಎನ್ನುವವರು ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಇವರಲ್ಲಿ ಓವರ್​ ಸೀಸ್​ ಸಿಟಿಜನ್​ ಆಫ್​ ಇಂಡಿಯಾ (ಅನಿವಾಸಿ ಭಾರತೀಯ) ಕಾರ್ಡ್​ ಕೂಡ ಇದೆ!

ಇನ್ನು ಐರ್ಲೆಂಡ್​ ದೇಶದಲ್ಲಿ ಲಿಯೋ ವರಾದ್ಕರ್​ ಎನ್ನುವವರು ಪ್ರಧಾನಿ ಆಗಿದ್ದಾರೆ. ಇವರು ಮೂಲತಃ ಮಹರಾಷ್ಟ್ರ ಮೂಲದವರು.ಇನ್ನೂ ವಿಶೇಷ ಏನೆಂದರೆ ತಾವು ಸಲಿಂಗಿ ಎನ್ನುವುದನ್ನು ಘೋಷಿಸಿಕೊಂಡಿದ್ದಾರೆ.

ಐರ್ಲೆಂಡ್​ ಪ್ರಧಾನಿ ಲಿಯೋಫ ವರಾದ್ಕರ್​ ಮಹಾರಾಷ್ಟ್ರದ ತಮ್ಮ ಪೂರ್ವಜರ ಹಳ್ಳಿಗೆ ಭೇಟಿ ಕೊಟ್ಟ ಕ್ಷಣ...

ಇನ್ನು ಜಗತ್ತಿನ ಬೇರೆ ಭಾಗಗಳಲ್ಲಿ ಉಳಿದ 6 ಭಾರತ ಮೂಲದ ಪ್ರಧಾನಿಗಳು ಕೆಲಸ ಮಾಡುತ್ತಿದ್ದಾರೆ. ಆ ದೇಶಗಳು ಹೀಗಿವೆ:
1) ಗುಯಾನಾ: ಅಧ್ಯಕ್ಷ ಡಾ| ಇರ್ಫಾನ್ ಅಲಿ
2) ಸೇಶೆಲ್ಸ್: ​ಅಧ್ಯಕ್ಷ ವೇವಲ್​ ರಾಮಕಲಾವನ್​.
3) ಸುರಿನಮೆ: ಅಧ್ಯಕ್ಷ ಚಾನ್​ ಸಂತೋಕಿ
4) ಸಿಂಗಾಪುರ್​: ಅಧ್ಯಕ್ಷೆ ಹಲಿಮಾ ಯಕೂಬ್
5) ಬ್ರಿಟನ್​: ಪ್ರಧಾನಿ ರಿಷಿ ಸುನಕ್​
6) ಮಾರಿಷಸ್​: ಪ್ರಧಾನಿ ಪ್ರವಿಂದ್​ ಜುಗುನಾಥ್