ಇಂಡೋನೆಷ್ಯಾ: ( Snake Meat ) ಬೀದಿ ಬದಿಯ ಖಾದ್ಯಗಳು ನಾವು ಹೋಟೇಲ್ ಹಾಗೂ ಮನೆಯಲ್ಲಿ ಸೇವಿಸುವ ಆಹಾರಕ್ಕಿಂತ ಕೊಂಚ ವಿಭಿನ್ನವಾಗಿ ಮಾಡಿದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ನಾವು ಇಂದು ಹೇಳುತ್ತಿರುವ ರೆಸಿಪಿ ಕುರಿತಾಗಿ ತಿಳಿದ್ರೆ ಪ್ರಪಂಚದಲ್ಲಿ ಇಂತಹದೂ ಒಂದು ಪಕೋಡ ಇದೆಯಾ? ಎನ್ನುವ ಪ್ರಶ್ನೆ ಬರೋದು ಖಂಡಿತಾ ಹೌದು...
ಭಾರತೀಯ ವ್ಲಾಗೋರ್ ಒಬ್ಬ ಇಂಡೋನೇಷ್ಯಾದ ಬೀದಿ ಆಹಾರಗಳ ಬಗ್ಗೆ ಒಂದು ವಿಡಿಯೋ ಮಾಡಿದ್ದಾರೆ. ಅಲ್ಲಿ ಬೀದಿಯಲ್ಲಿ ಕೊಬ್ರಾ ಪಕೋಡಾದ ಬೋರ್ಡ್ ನೋಡಿ..ಅಂಗಡಿಯಲ್ಲಿ ವಿಚಾರಿಸಿದಾಗ ಅಂಗಡಿಯವನು ಹಾವುಗಳನ್ನು ಕತ್ತರಿಸಿ ಪಕೋಡಾ ಮಾಡಿ ತೋರಿಸಿದ್ದಾರೆ. ಇಂಡೋನೇಷಿಯಾದ ಜಕರ್ತಾದಲ್ಲಿನ ಜನರಿಗೆ ಸಿಕ್ಕಾಪಟ್ಟೆ ಇಷ್ಟದ ಆಹಾರ. ಒಂದು ಪಕೋಡಾಗೆ ಭಾರತೀಯ ರೂಪಾಯಿಗಳಲ್ಲಿ ಒಂದು ಸಾವಿರ ರೂಪಾಯಿ ಬೆಲೆ ಇದೆ ಎಂದು ಹೇಳಲಾಗಿದೆ.
ಕಾಶ್ ಚೌದ್ರಿ ಎಂಬ ಯುವಕ ಮಾಡಿದ ವಿಡಿಯೋದಲ್ಲಿ ರಾಶಿ ರಾಶಿ ಹಾವುಗಳನ್ನು ಒಂದು ಕಡೆ ಕೂಡಿ ಹಾಕಿರೋದನ್ನ ಅವುಗಳನ್ನು ಒಂದೊಂದಾಗಿ ಹೊರ ತೆಗೆದು ಕತ್ತರಿಸಿದ ಅದರ ಪಕೋಡಾ ಮಾಡಿ ಮಾರುವುದು ಕಂಡು ಬಂದಿದೆ. ಕೇವಲ ಹಾವಿನ ಮಾಂಸವಲ್ಲ, ಹಾವಿನ ರಕ್ತಕ್ಕೂ ಕೂಡ ತುಂಬಾ ಬೆಲೆ ಅದನ್ನು ಕೊಂಡುಕೊಳ್ಳಲು ಅಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ ಎಂಬುದನ್ನು ಕೂಡ ವ್ಲಾಗೋರ್ ಹೇಳಿದ್ದಾನೆ.
ಹಾವಿನ ಮಾಂಸ ತಿನ್ನುವುದರಿಂದ ಹೆಚ್ಚು ಶಕ್ತಿ ಬರುತ್ತೆ, ಚರ್ಮದ ಕಾಂತಿ ಹೆಚ್ಚಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎನ್ನುವುದು ಇಲ್ಲಿಯ ಜನರ ನಂಬಿಕೆ.