Uber Driver: ಇಂದಿನ ದಿನಗಳಲ್ಲಿ ಕ್ಯಾಬ್ ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ಗಲಭೆಗಳೇ ಹೆಚ್ಚುತ್ತಿರುವಂತಹ ಸಮಯದಲ್ಲಿ ಇಲ್ಲೊಬ್ಬ ಭಾರತೀಯ ಊಬರ್ ಚಾಲಕ ವಿದೇಶಿ ಪ್ರಯಾಣಿಕಳನ್ನು ಊಟಕ್ಕೆ ಮನೆಗೆ ಆಹ್ವಾನಿಸುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಸಾಮಾಜಿಕ ಬಳಕೆದಾರ @leiacoral ತಾನು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಊಬರ್ ಚಾಲಕನೊಂದಿಗೆ ಸಂವಹನ ನಡೆಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಇಲ್ಲಿ ಪ್ರಯಾಣಿಕ ಹಾಗೂ ಚಾಲಕ ಭಾರತೀಯ ವೈವಿಧ್ಯಮಯ ಪಾಕಪದ್ಧತಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂವಾದದ ನಂತರ, ಚಾಲಕ ಮಹಿಳೆಯನ್ನು ಊಟಕ್ಕೆಂದು ಮನೆಗೆ ಆಹ್ವಾನಿಸುತ್ತಾನೆ.
ಇದನ್ನೂ ಓದಿ: ಯುಕ್ರೇನ್ ಯುದ್ಧದ ಕುರಿತು ಮೋದಿ- ಪುಟಿನ್ ನಡುವೆ ಮಾತುಕತೆ ನಡೆದಿದೆ ಎಂಬ ನ್ಯಾಟೋ ಹೇಳಿಕೆಗೆ ಭಾರತ ತಿರುಗೇಟು | India
ಇದಾದ ನಂತರ ಪ್ರಯಾಣಿಕಳು ಅವನೊಂದಿಗೆ ಮನೆಗೆ ಹೋಗಲು ಒಪ್ಪಿಕೊಳ್ಳುತ್ತಾಳೆ. ಆದರೆ ನನ್ನ ಮಗನನ್ನು ಜೊತೆ ಕರೆದುಕೊಂಡು ಬರುವುದಾಗಿ ತಿಳಿಸುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸಿದ ಚಾಲಕ ತೊಂದರೆ ಇಲ್ಲ ಎನ್ನುತ್ತಾನೆ. ಆತ ಅವರಿಗೆ ಇಷ್ಟವಾದ ಭಕ್ಷ್ಯವನ್ನು ಬರೆದುಕೊಡುವಂತೆ ಒಂದು ಪೆನ್ನು ಮತ್ತು ಹಾಳೆಯನ್ನು ನೀಡುತ್ತಾನೆ.
ಇದಾದ ಬಳಿಕ ಇವರಿಬ್ಬರು ಭಾರತೀಯ ಪದ್ಧತಿಗಳ ಬಗ್ಗೆ ಮಾತುಗಳನ್ನು ಮುಂದುವರೆಸಿದ್ದಾರೆ. ಪ್ರಯಾಣಿಕರು ಚಾಲಕನ ಕರೆಯನ್ನು ಸ್ವೀಕರಿಸಿ ಅವನಿಗೆ ಧನ್ಯವಾದ ತಿಳಿಸಿದ್ದಾಳೆ.
ಇದನ್ನೂ ಓದಿ: ಬಿಕಿನಿ ಫೋಟೋಸ್ ನೋಡಿ ವ್ಯಂಗ್ಯವಾಡಿದ ನೆಟ್ಟಿಗರು! ಒಂದೇ ಒಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ..Sai Pallavi
ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಳಕೆದಾರರು ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ಭಾರತದಲ್ಲಿ ಮಾತ್ರ ಈ ರೀತಿಯ ಜನರಿದ್ದಾರೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಇಂದಿನ ದಿನಗಳಲ್ಲಿ ಕ್ಯಾಬ್ ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ಹೆಚ್ಚುತ್ತಿರುವ ಗಲಭೆಯಲ್ಲಿ ಈ ವಿಡಿಯೋ ಮಾರ್ಗದರ್ಶಿಯಾಗಿದೆ ಎಂದು ತಿಳಿಸಿದ್ದಾರೆ.
(ಏಜೆನ್ಸೀಸ್)