Maldives: ಹನ್ನೊಂದು ವರ್ಷದ ವಿದ್ಯಾರ್ಥಿಯ ಬೆರಳನ್ನು ಮುರಿದ ಆರೋಪದ ಮೇಲೆ ಭಾರತೀಯ ಮೂಲದ ಶಿಕ್ಷಕನ್ನು ಮಾಲ್ಡೀವ್ಸ್‌ನಲ್ಲಿ ಬುಧವಾರ (ಮೇ.28) ಬಂಧಿಸಲಾಗಿದೆ.
ನಡೆದಿದ್ದೇನು?
ಮೊದಲು ಶಿಕ್ಷಕನಿಗೆ ವಿದ್ಯಾರ್ಥಿಯೂ ನೀರಿನ ಬಾಟಲಿಯಿಂದ ಹೊಡೆದಿದ್ದಾರೆ, ಇದರಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಯ ಬೆರಳನ್ನು ಹಿಡಿದು ತಿರುಚಿದ್ದಾನೆ, ಇದರಿಂದ ಬಾಲಕನ ಬೆರಳು ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ನಟಿಯಾಗಲು ಸೌಂದರ್ಯ ಅವರೇ ಕಾರಣ! ಅದೊಂದು ಘಟನೆಯೇ ಚಿತ್ರರಂಗ ಪ್ರವೇಶಿಸಲು ಪ್ರೇರಣೆ: ನಂದಿನಿ ರೈ | Nandini Rai
ಥಾ ಅಟಾಲ್‌ನ ಕಂಡೂಧೂ ದ್ವೀಪದಲ್ಲಿರುವ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಮುರಿದ ಬೆರಳಿನ ಕೀಲು ಸ್ಥಳಾಂತರಗೊಂಡ ಕಾರಣ ಬಾಲಕನಿಗೆ ಅತೀಯಾದ ನೋವು ಕಾಣಿಸಿಕೊಂಡಿದ್ದು, ಶಾಲೆಯ ಉಳಿದ ಶಿಕ್ಷಕರು ಬಂದು ಹುಡುಗನ ಸ್ಥಳಾಂತರಗೊಂಡ ಕೀಲನ್ನು ಸಹಿ ಮಾಡಲು ಪ್ರಯತ್ನಿಸಿದರು ಆದರೆ, ಆಳವಾದ ನೋವಿನಿಂದ ಬಾಲಕನು ಅಳುತ್ತಿದ್ದನು, ಇದನ್ನು ನೋಡಿದ ತರಗತಿ ಶಿಕ್ಷಕರು ಕೂಡಲೇ ಅವನ ತಂದೆಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ.
ಇದಕ್ಕೆ ಕಾರಣವಾದ ಭಾರತೀಯ ಮೂಲದ ಶಿಕ್ಷಕನನ್ನು ಅಲ್ಲಿನ ನ್ಯಾಯಾಲಯದ ಆದೇಶದ ಮೇರೆಗೆ ಮಂಗಳವಾರ ಬಂಧಿಸಲಾಗಿದೆ. (ಏಜೆನ್ಸೀಸ್)