ನವದೆಹಲಿ: ನೇಪಾಳದ ಬಾರಾ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಬಸ್ ಕಠ್ಮಂಡುವಿನಿಂದ ಜನಕ್‌ಪುರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಭಾರತೀಯ ಯಾತ್ರಿಕರನ್ನು ಹೊತ್ತೊಯ್ಯುತ್ತಿದ ಬಸ್ ಬಾರಾದ ಚುರಿಯಾಮೈ ಬಳಿ ಅಪಘಾತಕ್ಕೀಢಾಗಿದೆ.
ಪೂರ್ವ-ಪಶ್ಚಿಮ ಹೆದ್ದಾರಿಯಲ್ಲಿ ಸಿಮಾರಾ ಸಬ್-ಮೆಟ್ರೋಪಾಲಿಟನ್ ಸಿಟಿ-22 ರ ಚುರಿಯಮೈ ದೇವಸ್ಥಾನದ ದಕ್ಷಿಣಕ್ಕೆ ನದಿ ದಂಡೆ ಬಳಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಸ್ ಪಲ್ಟಿಯಾಗಿ ಸುಮಾರು 50 ಮೀಟರ್ ರಸ್ತೆಯ ಕೆಳಗೆ ಬಿದ್ದಿದೆ ಎಂದು ಮಾಹಿತಿ ನೀಡಲಾಗಿದೆ.
ಮೃತ ಭಾರತೀಯ ಪ್ರಜೆಗಳನ್ನು ಭಾರತದ ರಾಜಸ್ಥಾನ ರಾಜ್ಯದ ಪೊಲೀಸರು ಗುರುತಿಸಿದ್ದಾರೆ. ಅಪಘಾತದಲ್ಲಿ ನೇಪಾಳಿ ಪ್ರಜೆಯೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ಚಾಲಕರು ಮತ್ತು ಸಹಾಯಕರು ಸೇರಿದಂತೆ ಒಟ್ಟು 27 ಮಂದಿ ಬಸ್‌ನಲ್ಲಿದ್ದರು.