ನವದೆಹಲಿ : ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಹಾಕಿ ಆಟಗಾರ ಮನ್ಪ್ರೀತ್ ಸಿಂಗ್ ಅವರನ್ನು ಟೋಕಿಯೋ ಒಲಂಪಿಕ್ಸ್ನ ಉದ್ಘಾಟನಾ ಸಮಾರಂಭಕ್ಕೆ ಭಾರತ ತಂಡದ ಫ್ಲ್ಯಾಗ್ ಬೇರರ್ಸ್ ಆಗಿ ಘೋಷಿಸಲಾಗಿದೆ. ಕುಸ್ತಿಪಟು ಬಜರಂಗ್ ಪೂನಿಯ ಅವರನ್ನು ಸಮಾರೋಪ ಸಮಾರಂಭದ ಫ್ಲ್ಯಾಗ್ ಬೇರರ್ ಆಗಿ ಆಯ್ಕೆ ಮಾಡಲಾಗಿದೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ಈ ತಿಂಗಳ ಜುಲೈ 23 ರ ಶುಕ್ರವಾರ ಆರಂಭವಾಗಲಿರುವ ಒಲಂಪಿಕ್ ಗೇಮ್ಸ್ ಆಗಸ್ಟ್ 8 ರ ಭಾನುವಾರದವರೆಗೆ ನಡೆಯಲಿದೆ. ಕಳೆದ ವರ್ಷವೇ ನಡೆಯಬೇಕಿದ್ದ ಒಲಂಪಿಕ್ಸ್ ಪಂದ್ಯಾವಳಿಯು ಕರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ನಡೆಯಲಿದೆ. (ಏಜೆನ್ಸೀಸ್)