ನವದೆಹಲಿ: ಚೀನಾದಲ್ಲಿ ಮಹಾಮಾರಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆ ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಉಂಟಾಗಿದೆ ಎಂದು ಭಾರತೀಯ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮೊಹಿಂದ್ರೂ ತಿಳಿಸಿದ್ದಾರೆ.
ಬುಧವಾರದಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪಂಕಜ್ ಮೊಹಿಂದ್ರೂ, ಚೀನಾದಲ್ಲಿ ಅನೇಕ ಕಾರ್ಖಾನೆಗಳು ತೆರೆದಿವೆ. ಆದರೂ ಅಲ್ಲಿ ಹೆಚ್ಚಿನ ಪ್ರಮಾಣದ ಕೆಲಸ ನಡೆಯುತ್ತಿಲ್ಲ. ಭಾರತ ಎಲೆಕ್ಟ್ರಾನಿಕ್ಸ್ ವಿಚಾರದಲ್ಲಿ ಚೀನಾವನ್ನು ಅವಲಂಬಿಸಿದೆ. ಹಾಗಾಗಿ ಚೀನಾದಲ್ಲಿ ಉಂಟಾಗಿರುವ ಕೊರೊನಾ ವೈರಸ್ನ ಭೀತಿಯು ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ನೀಡುತ್ತಿದೆ. ಇಲ್ಲಿನ ಕಾರ್ಖಾನೆಗಳು, ವ್ಯಾಪಾರ ಎಲ್ಲವು ಸ್ಥಗಿತಗೊಳ್ಳುವ ಮಟ್ಟಿಗೆ ಬಂದು ತಲುಪಿದೆ ಎಂದು ಹೇಳಿದರು.
ಚೀನಾ ಎಲೆಕ್ಟ್ರಾನಿಕ್ಸ್ ವಿಚಾರದಲ್ಲಿ ಚೀನಾವನ್ನು ಅವಲಂಬಿಸಿದೆ. ಅಲ್ಲಿ ತಯಾರಾಗುವ ಅನೇಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮತ್ತು ಬಿಡಿ ಭಾಗಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಸ್ಮಾರ್ಟ್ಫೋನ್ಗಳ ವಿಚಾರದಲ್ಲಿಯೂ ಚೀನಾವನ್ನು ಅವಲಂಬಿಸಿರುವ ಭಾರತಕ್ಕೆ ಕೊರೊನಾ ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ಚೀನಾದಿಂದ ಆಮದು ಸಾಧ್ಯವಾಗುತ್ತಿಲ್ಲ. (ಏಜೆನ್ಸೀಸ್)