ನ್ಯೂಸ್

ದೇವಾಲಯದ ಆಭರಣಗಳನ್ನು 172 ಬಾರಿ ಅಡವಿಟ್ಟ ಅರ್ಚಕ; 6 ವರ್ಷ ಸಜೆ

ಸಿಂಗಾಪುರ: ಸಿಂಗಾಪುರದಲ್ಲಿರುವ ಅತ್ಯಂತ ಪುರಾತನ ಹಿಂದೂ ದೇವಾಲಯದ ಆಭರಣಗಳನ್ನು172 ಭಾರಿ ಅಡವಿಟ್ಟ ಆರೋಪದ ಮೇಲೆ ಭಾರತ ಮೂಲದ ಪ್ರಧಾನ ಅರ್ಚಕನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಆರು ಷರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಕಂದಸ್ವಾಮಿ ಸೇನಾಪತಿ(39) ಶಿಕ್ಷೆಗೆ ಗುರಿಯಾದ ಅರ್ಚಕ ಎಂದು ತಿಳಿದು ಬಂದಿದೆ. 2103 ಡಿಸೆಂಬರ್​ ತಿಂಗಳಿನಿಂದ ಡೌನ್​ಟೌನ್​ನಲ್ಲಿರುವ ಮಾರಿಯಮ್ಮನ್​ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಮಾರ್ಚ್​ 30, 2020ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆಡಿಟ್​ ವೇಳೆ ಬೆಳಕಿಗೆ

ಅಧಿಕಾರ ದುರುಪಯೋಗ, ನಂಬಿಕೆ ದ್ರೋಹ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ತಪ್ಪೊಪ್ಪಿಕೊಂಡಿದ್ದಾರೆ. ನ್ಯಾಯಾಲಯ ಶಿಕ್ಷೆ ವಿಧಿಸುವ ವೇಳೆ ಆರು ಆರೋಪಗಳನ್ನು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.

2020ರಲ್ಲಿ ಕೋವಿಡ್​ ಲಾಕ್​ಡೌನ್​ ವೇಳೆ ನಡೆದ ದೇವಸ್ಥಾನದ ಲೆಕ್ಕಪತ್ರ ಪರಿಶೋಧನೆ ವೇಳೆ ಆಭರಣಗಳು ಸಿಗದಿದ್ದ ವೇಳೆ ಬಂಧಿತ ಆರೋಪಿ ಸೇನಾಪತಿ ಒಡವೆಗಳನ್ನು ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ.

2014ರಲ್ಲಿ ಗರ್ಭಗುಡಿಯ ಹಾಗೂ ಒಡವೆಗಳನ್ನು ಇಡಲಾಗಿದ್ದ ಸೇಫ್​ ಲಾಕರ್​ ಕೀಲಿ ಕೈಯನ್ನು ಸೇನಾಪತಿಗೆ ಒಪ್ಪಿಸಲಾಗಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಆರೋಪಿ ಒಟ್ಟು 172 ಭಾರೀ ಆಭರಣಗಳನ್ನು ಅಡವಿಟ್ಟಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

ಆರೋಪಿ ತಪ್ಪೊಪ್ಪಿಗೆ

ಆಭರಣಗಳನ್ನು ಅಡವಿಡುವುದರಿಂದ ಬರುವ ಹಣದಿಂದ ಆರೋಪಿಯೂ ಭಾರತದಲ್ಲಿರುವ ತಮ್ಮ ಸಂಬಂಧಿಕರೊಬ್ಬರ ಖಾತೆಗೆ ವರ್ಗಾಯಿಸುತ್ತಿದ್ದನ್ನು.

2020ರಲ್ಲಿ ಲೆಕ್ಕಪತ್ರ ಪರಿಶೋಧನೆ ವೇಳೆ ಸೇನಾಪತಿಗೆ ಕೀಲಿ ಕೈಗಳನ್ನು ಕೇಳಿದ ಸಂದರ್ಭ ಆತ ಅದನ್ನು ಭಾರತದಲ್ಲೇ ಮರೆತು ಬಂದಿರುವುದಾಗಿ ಮೊದಲಿಗೆ ಹೇಳಿದ್ದಾನೆ. ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವು ಆರೋಪಿ ಅರ್ಚಕನಿಗೆ 6 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.