ನ್ಯೂಸ್

ನ್ಯೂಯಾರ್ಕ್​​ನಲ್ಲಿ ಬಸ್​ ಅಪಘಾತ: ಭಾರತೀಯರು ಸೇರಿ 5 ಪ್ರಯಾಣಿಕರ ಸಾವು!

ಬಾಬುಪ್ರಸಾದ್​ ಮೋಡಿಸ್​

ಪ್ರವಾಸಿ ಬಸ್ ಅಪಘಾತಕ್ಕೀಡಾಗಿ 5 ಪ್ರಯಾಣಿಕರು ಮೃತಪಟ್ಟಿರುವ ಘಟನೆ ನ್ಯೂಯಾರ್ಕ್ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಯಾಗರಾ ಜಲಪಾತವನ್ನು ವೀಕ್ಷಿಸಿದ ನಂತರ ಪ್ರವಾಸಿಗರು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಬಫಲೋದಿಂದ ಪೂರ್ವಕ್ಕೆ 25 ಮೈಲಿ (40 ಕಿಲೋಮೀಟರ್) ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಭಾರತೀಯ, ಚೀನೀ ಮತ್ತು ಫಿಲಿಪಿನೋ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)