Airspace : ಭಾರತವು ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಕೆಲವು ದಿನಗಳಿಂದ ಸ್ಥಗಿತಗೊಳಿಸಿದ್ದು, ಮತ್ತೆ ತನ್ನ ವಾಯುಪ್ರದೇಶದ ಮುಚ್ಚುವಿಕೆಯನ್ನು ಸೆಪ್ಟೆಂಬರ್ 24 ರವರೆಗೆ ವಿಸ್ತರಿಸಿ ದಿಟ್ಟ ಉತ್ತರ ನೀಡಿದೆ.
ಎರಡೂ ದೇಶಗಳು ವಾಯುಪ್ರದೇಶವನ್ನು ಮುಚ್ಚುವಿಕೆಯ ವಿಸ್ತರಿಸುವ ಕುರಿತು ವಾಯುಪಡೆಗೆ ಪ್ರತ್ಯೇಕ ಸೂಚನೆಯನ್ನು ನೀಡಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಸಾವನ್ನಪ್ಪಿದ ನಂತರ, ಭಾರತ ಸರ್ಕಾರ ಏಪ್ರಿಲ್ 30 ರಿಂದ ಜಾರಿಗೆ ಬರುವಂತೆ ವಿಮಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಒಡೆತನದ ವಿಮಾನಗಳು, ಮಿಲಿಟರಿ ವಿಮಾನಗಳು, ಗುತ್ತಿಗೆ ಪಡೆದ ವಿಮಾನಗಳ ಹಾರಾಟವನ್ನು ಭಾರತ ತನ್ನ ವಾಯುಪ್ರದೆಶದಲ್ಲಿ ನಿರ್ಬಂಧಿಸಿತ್ತು. ಇದೀಗ ಮತ್ತೆ ವಿಮಾನದ ಹಾರಾಟದ ನಿರ್ಬಂಧವನ್ನು ಮುಂದೂಡಿದ್ದು, ಸೆಪ್ಟೆಂಬರ್ 24 ರ ನಂತರ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
(ಏಜೆನ್ಸೀಸ್)