ನ್ಯೂಸ್

ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್

ಭೋಪಾಲ್ : ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಭೋಪಾಲ್ ಬಳಿಯ ಹೊಲಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಭಾರತೀಯ ವಾಯುಪಡೆಯ ಎಎಲ್‌ಎಚ್ ಧ್ರುವ ಹೆಲಿಕಾಪ್ಟರ್ ಭಾನುವಾರ ಮಧ್ಯಪ್ರದೇಶ ರಾಜ್ಯದ ಭೋಪಾಲ್ ನಗರದ ಸಮೀಪವಿರುವ ಹೊಲಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಅನ್ನು ಮುಂಜಾಗ್ರತಾ ಕ್ರಮವಾಗಿ ಜಮೀನಿನಲ್ಲಿ ಇಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್ ಬಳಿ ಮುನ್ನೆಚ್ಚರಿಕೆಯಿಂದ ಲ್ಯಾಂಡಿಂಗ್ ಮಾಡಲಾಗಿದ್ದು, ಹೆಲಿಕಾಪ್ಟರ್‌ನಲ್ಲಿರುವ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.

ಹೆಲಿಕಾಪ್ಟರ್‌ನಲ್ಲಿನ ತಾಂತ್ರಿಕ ದೋಷ ಸರಿಪಡಿಸಲು ಹೆಲಿಕಾಪ್ಟರ್ ಇಳಿದ ಪ್ರದೇಶಕ್ಕೆ ತಜ್ಞರ ತಂಡ ಬರಲಿದೆ. ಭಾರತೀಯ ವಾಯುಪಡೆಯ ALH ಧ್ರುವ Mk 3 ಹೆಲಿಕಾಪ್ಟರ್ ಮಿಷನ್‌ನ ಭಾಗವಾಗಿ ಭೋಪಾಲ್‌ನಿಂದ ಚಕೇರಿಗೆ ತೆರಳುತ್ತಿತ್ತು ಮತ್ತು ಭೋಪಾಲ್ ವಿಮಾನ ನಿಲ್ದಾಣದಿಂದ 50 ಕಿಮೀ ದೂರದಲ್ಲಿರುವ ಡುಂಗರಿಯಾ ಅಣೆಕಟ್ಟಿನ ಬಳಿ ಸುರಕ್ಷಿತ ಮುನ್ನೆಚ್ಚರಿಕೆ ಲ್ಯಾಂಡಿಂಗ್ ಮಾಡಿದೆ.

ಹೆಲಿಕಾಪ್ಟರ್‌ನಲ್ಲಿ ಆರು ಮಂದಿ ಸೇನಾ ಸಿಬ್ಬಂದಿ ಇದ್ದರು. ಭೋಪಾಲ್‌ನಿಂದ 60 ಕಿಮೀ ದೂರದಲ್ಲಿರುವ ಬೆರಾಸಿಯಾ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಸಂಭವಿಸಿದೆ.