Piyush Goyal: ಭಾರತವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳಿಗೆ ಮಣಿಯುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ನಡೆದ ನಿರ್ಮಾಣ ಉದ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಯಲ್, ಭಾರತ ಯಾವಾಗಲೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಿದ್ಧವಾಗಿದೆ. ಅಲ್ಲದೆ, ಭಾರತ ಯಾವುದೇ ಸಂದರ್ಭದಲ್ಲಿ ದುರ್ಬಲವಾಗಿ ಕಾಣುವುದಿಲ್ಲ. ನಾವು ಒಟ್ಟಾಗಿ ಹೋಗುವುದನ್ನು ಮುಂದುವರಿಸುತ್ತೇವೆ ಮತ್ತು ಹೊಸ ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಗೋಯಲ್ ಸೂಚಿಸಿದ್ದಾರೆ.
ಮುಂದುವರೆದು ಮಾತನಾಡಿದ ಗೋಯಲ್, ಪ್ರತಿಯೊಂದು ವಲಯವನ್ನು ಬೆಂಬಲಿಸಲು ಮತ್ತು ರಫ್ತು ಹೆಚ್ಚಿಸಲು ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ಹಲವಾರು ಕ್ರಮಗಳನ್ನು ಘೋಷಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪೋರ್ನ್ ವೆಬ್ಸೈಟ್ನಲ್ಲಿ ಇಟಲಿ ಪ್ರಧಾನಿ, ವಿಪಕ್ಷ ನಾಯಕಿಯ ನಕಲಿ ಫೋಟೋ; ಪಿಎಂ ಮೆಲೋನಿ ಆಕ್ರೋಶ| Giorgia Meloni
ಈ ವರ್ಷ ಭಾರತದ ರಫ್ತು 2024-25ರ ಸಂಖ್ಯೆಗಳನ್ನು ಮೀರುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಕೇಂದ್ರ ವಾಣಿಜ್ಯ ಸಚಿವರು ಹೇಳಿದ್ದಾರೆ.
ಟ್ರಂಪ್ ಆಡಳಿತವು ಭಾರತದ ಮೇಲೆ ಒಟ್ಟು ಶೇ.50 ರಷ್ಟು ಸುಂಕಗಳನ್ನು ವಿಧಿಸಿದೆ. ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವನ್ನು ಅದು ತೀವ್ರವಾಗಿ ಟೀಕಿಸಿದೆ. ಭಾರತವು ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗೆ ರಷ್ಯಾ ತೈಲವನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ಭಾರಿ ಲಾಭ ಗಳಿಸುತ್ತಿದೆ ಎಂದು ಯುಎಸ್ ಆರೋಪಿಸಿದೆ. ಅಲ್ಲದೆ, ಟ್ರಂಪ್ ವಿಧಿಸಿರುವ ಅನ್ಯಾಯದ ಸುಂಕ ಎಂದು ಭಾರತ ಟೀಕಿಸಿದೆ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ.(ಏಜೆನ್ಸೀಸ್)