ISRO:2035ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಮತ್ತು ಭಾರತೀಯ ಅಂತರಿಕ್ಷ ನಿಲ್ದಾಣ (ಬಿಎಎಸ್) ಹೊಂದಲಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಶನಿವಾರ (ಆಗಸ್ಟ್,23) ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ, 2040ರ ವೇಳೆಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ವಿಶ್ವದ ಯಾವುದೇ ದೇಶದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರ ನಿರ್ದೇಶನ ಮತ್ತು ದೃಷ್ಟಿಕೋನದ ಆಧಾರದ ಮೇಲೆ ನಾವು ಚಂದ್ರಯಾನ-4 ಮಿಷನ್ ಅನ್ನು ಹೊಂದಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ನಾವು ವೀನಸ್ ಆರ್ಬಿಟರ್ ಮಿಷನ್ ಹೊಂದಲಿದ್ದೇವೆ. ಭಾರತ 2035ರ ವೇಳೆಗೆ ಬಿಎಎಸ್ ಎಂಬ ಬಾಹ್ಯಾಕಾಶ ನಿಲ್ದಾಣ ಇರಲಿದೆ. ಮೊದಲ ಮಾಡ್ಯೂಲ್ ಅನ್ನು 2028ರ ವೇಳೆಗೆ ಎತ್ತಲಾಗುವುದು ಮತ್ತು ಪ್ರಧಾನಿಯವರು ಎನ್ಜಿಎಲ್ಗೆ ಅನುಮೋದನೆ ನೀಡಿದ್ದಾರೆ.
ಇದನ್ನೂ ಓದಿ: ಯುಕ್ರೇನ್ ಮೇಲಿನ ಯುದ್ಧ ನಿಲ್ಲಿಸದಿದ್ದರೆ, ರಷ್ಯಾ ಮೇಲೆ ಭಾರೀ ನಿರ್ಬಂಧ ಹೇರುವುದಾಗಿ ಟ್ರಂಪ್ ಬೆದರಿಕೆ| Donald Trump
ಮುಂದುವರೆದು ಮಾತನಾಡಿದ ವಿ. ನಾರಾಯಣ್, 2040ರ ವೇಳೆಗೆ ಭಾರತ ಚಂದ್ರನ ಮೇಲೆ ಇಳಿಯುತ್ತದೆ. ನಾವು ಸುರಕ್ಷಿತವಾಗಿ ಮರಳಿ ಬರಲಿದ್ದೇವೆ. ಆ ಮೂಲಕ 2040ರ ವೇಳೆಗೆ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವು ವಿಶ್ವದ ಯಾವುದೇ ಇತರ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಮನಾಗಿರುತ್ತದೆ ಎಂದು ಇಸ್ರೋ ಅಧ್ಯಕ್ಷ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಶುಭಾಂಶು ಶುಕ್ಲಾ ಅವರ ಐಎಸ್‌ಎಸ್ ಭೇಟಿಯನ್ನು ಶ್ಲಾಘಿಸಿದ ನಾರಾಯಣನ್, ನಮ್ಮ ರಾಕೆಟ್ ಮೂಲಕ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ಐಎಸ್‌ಎಸ್‌ಗೆ ಯಾರನ್ನಾದರೂ ಕಳುಹಿಸಬೇಕು ಎಂಬುದು ಪ್ರಧಾನಿಯವರ ಆಲೋಚನೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಗಗನಯಾತ್ರಿಗಳಲ್ಲಿ ಒಬ್ಬರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವುದು ನಮ್ಮ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಅದಕ್ಕೆ ಮತ್ತೊಮ್ಮೆ ಪ್ರಧಾನಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ.
ನಮ್ಮ ರಾಕೆಟ್ ಮೂಲಕ ಗಗನ್‌ಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು, ನಾವು ಅವರಲ್ಲಿ ಒಬ್ಬರನ್ನು ISSಗೆ ಕಳುಹಿಸಬೇಕು ಎಂಬುದು ಪ್ರಧಾನಿ ಆಲೋಚನೆಯಾಗಿತ್ತು. ಮೋದಿಯವರ ದೂರದೃಷ್ಟಿ ಇಂದು ದೊಡ್ಡ ಯಶಸ್ಸಿಗೆ ಕಾರಣವಾಯಿತು. ಶುಕ್ಲಾ ISSಗೆ ಹೋಗಿದ್ದಾರೆ ಮತ್ತು ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ನಾವು ಶುಕ್ಲಾ ಜತೆ ಇದ್ದ ಮೂವರು ಸಹೋದ್ಯೋಗಿಗಳನ್ನು ಮರೆಯಲು ಸಾಧ್ಯವಿಲ್ಲ. ನಾನು 4 ಜನರು ನಮಗೆ ಸಮಾನವಾಗಿ ಮುಖ್ಯ ಎಂದು ಹೇಳುತ್ತಿದ್ದೆ. ಅಂತಿಮವಾಗಿ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ಸಿಕ್ಕಿತು ಎಂದು ವಿ. ನಾರಾಯಣನ್ ಹೇಳಿದ್ದಾರೆ.(ಏಜೆನ್ಸೀಸ್)