ನವದೆಹಲಿ: ವರ್ಲ್ಡ್ ಪ್ರೆಸ್ ಫ್ರೀಡಂ ಇಂಡೆಕ್ಸ್ನಲ್ಲಿ ಭಾರತದ ರ್ಯಾಂಕಿಂಗ್ 142ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಕುಸಿದಿದೆ. ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ ಪ್ರತಿ ವರ್ಷ ಮೇ 3ರಂದು ವರ್ಲ್ಡ್ ಪ್ರೆಸ್ ಫ್ರೀಡಂ ದಿನ ಈ ವರದಿಯನ್ನು ಪ್ರಕಟಿಸುತ್ತಿದೆ.
ಕಳೆದ ವರ್ಷ ಭಾರತ 142ನೇ ಸ್ಥಾನದಲ್ಲಿತ್ತು. ಈ ವರ್ಷ 150ನೇ ಸ್ಥಾನಕ್ಕೆ ಕುಸಿದ ಭಾರತ "ಮಾಧ್ಯಮಗಳಿಗೆ ಅತ್ಯಂತ ಅಪಾಯಕಾರಿ' ರಾಷ್ಟ್ರ ಎಂದು ಬಿಂಬಿಸಲ್ಪಟ್ಟಿದೆ. ಭಾರತದಲ್ಲಿ 36000 ವಾರ ಪತ್ರಿಕೆ ಸೇರಿ 1 ಲಕ್ಷಕ್ಕೂ ಹೆಚ್ಚು ಸುದ್ದಿಪತ್ರಿಕೆಗಳು ಮತ್ತು 380 ಟಿವಿ ನ್ಯೂಸ್ ಚಾನೆಲ್ಗಳಿವೆ. 180 ರಾಷ್ಟ್ರಗಳ ಪತ್ರಿಕೋದ್ಯಮದ ಸ್ಥಿತಿಗತಿಯನ್ನು ಈ ವರದಿ ಬಿಂಬಿಸುತ್ತದೆ. 2016ರಲ್ಲಿ ಭಾರತ 133ನೇ ಸ್ಥಾನದಲ್ಲಿತ್ತು ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ.