ನವದೆಹಲಿ: ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಕ್ಕೆ 2020-21ನೇ ಸಾಲಿನ ಬಜೆಟ್ನಲ್ಲಿ -ಠಿ; 8 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿರುವುದರಿಂದ ಈ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ 3ನೇ ದೊಡ್ಡ ದೇಶವಾಗಿ ಹೊರಹೊಮ್ಮುವ ಸಾಧ್ಯತೆಯನ್ನು ಹೆಚ್ಚಿಸಿದೆ. ಪ್ರಸ್ತುತ ಅಮೆರಿಕ ಮತ್ತು ಚೀನಾ ಈ ಕ್ಷೇತ್ರದಲ್ಲಿ ಮೊದಲೆರಡು ಸ್ಥಾನಗಳಲ್ಲಿವೆ.
ಕ್ವಾಂಟಂ ತಂತ್ರಜ್ಞಾನವು ಕಂಪ್ಯೂಟಿಂಗ್, ಸಂವಹನ, ಸೈಬರ್ ಭದ್ರತೆ ಮೊದಲಾದ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಅನ್ವಯವಾಗುತ್ತಿರುವುದರಿಂದ ಅದು ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಸೈಬರ್ ಭದ್ರತೆಯ ಸುಧಾರಣೆಯಿಂದ ಹಿಡಿದು ಹೊಸ ಔಷಧಗಳ ತಯಾರಿಕೆಗೆ ರಾಸಾಯನಿಕ ಪ್ರತಿಕ್ರಿಯೆಗಳ ಮಾದರಿ ರಚಿಸುವವರೆಗೆ ಹಾಗೂ ಸರಬರಾಜು ಜಾಲವನ್ನು ಹೆಚ್ಚು ದಕ್ಷಗೊಳಿಸುವವರೆಗೆ ಕ್ವಾಂಟಂ ಕಂಪ್ಯೂಟಿಂಗ್ ಅಪಾರ ಶಕ್ತಿಶಾಲಿ ಕಂಪ್ಯೂಟರ್ ರೂಪಿಸಲು ನೆರವಾಗುತ್ತದೆ. ಇಂಥ ಕಂಪ್ಯೂಟರ್ ಸಾಂಪ್ರದಾಯಿಕ ಕಂಪ್ಯೂಟರ್ಗಳಿಗಿಂತ ಹೆಚ್ಚು ವೇಗವಾಗಿ ಹಾಗೂ ದಕ್ಷತೆಯಿಂದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಅನುದಾನವನ್ನು ಸೂಕ್ತವಾಗಿ ಬಳಸಿಕೊಂಡರೆ ಬಹುಶಃ ಭಾರತ ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್, ಮಷಿನ್ ಕಲಿಕೆ, ರೋಬಾಟಿಕ್ಸ್, ಬಯೋ ಇನ್ಫರ್ವ್ಯಾಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನಗಳನ್ನು ಅಳವಡಿಸಿದರೆ ತುಂಬಾ ಬಲಿಷ್ಠ ಡಿಜಿಟಲ್ ಆರ್ಥಿಕತೆಗೆ ಬುನಾದಿ ಹಾಕಿದಂತಾಗುತ್ತದೆ ಎಂಬುದು ಐಟಿ ತಜ್ಞರ ಅಭಿಪ್ರಾಯ.
ಕ್ವಾಂಟಂ ಸಾಮರ್ಥ್ಯ
ಕ್ವಾಂಟಂ ಸಿದ್ಧಾಂತದ ಆಧಾರದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕ್ಷೇತ್ರವೇ ಕ್ವಾಂಟಂ ಕಂಪ್ಯೂಟಿಂಗ್. ಕ್ವಾಂಟಂ ಸಿದ್ಧಾಂತವು ಅಣು ಮತ್ತು ಅದಕ್ಕೂ ಸಣ್ಣ ಘಟಕದ ಮಟ್ಟದಲ್ಲಿ ಶಕ್ತಿ ಮತ್ತು ವಸ್ತುವಿನ ವರ್ತನೆಯನ್ನು ವಿವರಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಬಳಸುವ ಸಾಂಪ್ರದಾಯಿಕ ಬಿಟ್ಗಳಾದ ‘ಒನ್’ ಮತ್ತು ‘ಝೀರೊ’ಗಳ ಸ್ಥಾನದಲ್ಲಿ ಕ್ವಾಂಟಂ ಬಿಟ್ಸ್ (ಕ್ಯುಬಿಟ್ಸ್) ಇರುವ ಮೂಲಕ ಅತಿವೇಗವಾಗಿ ಕಾರ್ಯನಿರ್ವಹಿಸುತ್ತವೆ.
ಕ್ವಾಂಟಂ ಕಂಪ್ಯೂಟಿಂಗ್ಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಒದಗಿಸಿರುವು ್ಢರಿಂದ ಕೈಗಾರಿಕೆ, ಮತ್ತು ಡಿಜಿಟಲ್ ಸೌಕರ್ಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ | ದೇವಜಾನಿ ಘೋಷ್ ನಾಸ್ಕಾಂ ಅಧ್ಯಕ್ಷ