Artificial intelligence:ಭಾರತ ಮುಂದಿನ 6 ತಿಂಗಳಲ್ಲಿ ಕೃತಕ ಬುದ್ಧಿಮತ್ತೆ (AI)ಯಲ್ಲಿ ಸಕ್ರಿಯವಾಗಿ ಅಳವಡಿಸಿಕೊಳ್ಳುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ದೊಡ್ಡ ನೆರವು ನೀಡಲಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣ ರಾಜ್ಯ ಸಚಿವ ಜಯಂತ್ ಚೌಧರಿ ಹೇಳಿದರು.
ಇದನ್ನೂ ಓದಿ:ನನ್ನ ಕ್ರಿಕೆಟ್ ಜೀವನವನ್ನು ರೂಪಿಸುವಲ್ಲಿ ಧೋನಿಯ ಪಾತ್ರ ದೊಡ್ಡದಿದೆ ಎಂದ ಶಿಖರ್ ಧವನ್ | Shikhar Dhawan
ನವದೆಹಲಿಯಲ್ಲಿ ಮಂಗಳವಾರ(ಜುಲೈ 22) ಕೌಶಲ್ಯ ಭಾರತ ಮಿಷನ್‌ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಭಾರತ್‌ಸ್ಕಿಲ್‌ಎನ್‌ಎಕ್ಸ್‌ಟಿ 2025 ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಯುವಕರನ್ನು AI ಕೌಶಲ್ಯಗಳಿಂದ ಸಜ್ಜುಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಕುರಿತು ಈ ವೇಳೆ ಹಂಚಿಕೊಂಡರು. ಇದು ವಿದ್ಯಾರ್ಥಿಗಳಿಗೆ ಕಲಿಯಲು ಮಾತ್ರವಲ್ಲದೆ, ಅವರ ದೈನಂದಿನ ಜೀವನದಲ್ಲಿ AI ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.
ಕೌಶಲ್ಯ ಹಿನ್ನಡೆಯಲ್ಲ ಅದು ರಾಷ್ಟ್ರದ ಪ್ರಗತಿಗೆ ನಿರ್ಣಾಯಕ ಅಡಿಪಾಯವಾಗಿದೆ. ಇದು ಅನುಭವಿಗಳಿಗೆ ಮರು ತರಬೇತಿ ನೀಡುತ್ತದೆ. ‘ಈ ನಿಟ್ಟಿನಲ್ಲಿ ಗ್ರಾಮೀಣ ಮಹಿಳೆಯರು ಕೂಡ ಉದ್ಯಮಿಗಳಾಗಬಹುದು. ಅಲ್ಲದೆ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳು AI ಅನ್ನು ಅಳವಡಿಸಿಕೊಂಡು ಯಶಸ್ಸು ಪಡೆಯಬಹುದು. ಇದು ಭಾರತದ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಭವಿಷ್ಯದ ಪ್ರತಿಭೆಯನ್ನು ಗುರುತಿಸಿ ಬೆಂಬಲ ನೀಡಲು ಸಹಾಯವಾಗುತ್ತದೆ ಎಂದರು.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಪ್ರಾಪಂಚಿಕ ಜ್ಞಾನ ಅಗತ್ಯ…
ಶಾಲಾ ಮಟ್ಟದಿಂದಲೇ AI ಅನ್ನು ಪರಿಚಯಿಸುವ SOAR(Skilling for AI Readiness) ನಂತಹ ಉಪಕ್ರಮಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಭಾರತದ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತವೆ. ನಮ್ಮ ದೇಶ 2047 ರಲ್ಲಿ ವಿಕಸಿತ ಭಾರತ ದೃಷ್ಠಿಕೋನದಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗದೆ, ವಿನ್ಯಾಸದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ನಮ್ಮ ಜನರು ಕೌಶಲ್ಯಪೂರ್ಣ, ಆತ್ಮವಿಶ್ವಾಸ ಮತ್ತು ಭವಿಷ್ಯಕ್ಕೆ ಸಿದ್ಧರಾಗಿದ್ದಾರೆ" ಎಂದು ಸಚಿವರು ಹೇಳಿದರು.(ಏಜೆನ್ಸೀಸ್)